13 October 2011

ಸ್ವಾತಂತ್ರವಿಲ್ಲ ನಿನ್ನ ಆಯ್ಕೆಗೆ



ಗೆಳತಿ ನಿನಗೆ ಏಕೆ ಹೀಗೆ ಇಲ್ಲದ ನೋವು ತಳಮಳ
ಬಯಸಿದ ಆಸೆಪಟ್ಟಿದ್ದೆಲ್ಲ ದೊರೆಯುವುದಿಲ್ಲ ಎಲ್ಲ ಅಯೋಮಯ


ಖುಷಿಯ ಕ್ಷಣಕಿಂತ ನೋವಿನ ನೆನಪೇ ಬಹಳ
ಸಾಗಬೇಕಾದ ದಾರಿಯ ಅರಿವಿಲ್ಲ ಒಳಗಡೆ ನೋವಿದೆ
ಯಾರಿಗೂ ಅರಿವಾಗದ ನೋವುಗಳ ಪಾತಾಳ !



ಏನೆಲ್ಲಾ ಕನಸುಗಳಿದ್ದವು ಗೆಳತಿ ನಿನ್ನೆದುರಲ್ಲಿ
ಬಾಲ್ಯದ ಸವಿ ನೆನಪುಗಳ ಮನೆ ಮಾಡಿತ್ತು ನಿನ್ನಲ್ಲಿ
ಏನೆಲ್ಲಾ ಸಾಧನೆ ಸಾಹಸ ಮಾಡಬೇಕಾಗಿತ್ತು ಎನಿಸಿತ್ತು ಮನದಲ್ಲಿ



ಬೆಳೆದ ಮೇಲೆ ಏನಾಯ್ತು ಗೆಳತಿ ! ಕನಸುಗಳು ಕೊಚ್ಚಿ ಹೋದವು ಬೇರೆಯವರ ಸುಖದಲ್ಲಿ
ನಿನ್ನೆಲ್ಲ ಇಷ್ಟ ಕಷ್ಟಗಳ ಕೇಳುವರಿಲ್ಲ ಈ ಹಾಳು ಜಗದಲ್ಲಿ
ಹೊಂದಿಕೊಂಡೇ ಬಾಳಬೇಕು ಸುತ್ತ ಮುತ್ತಿನ ಜನರ ನಡುವಿನಲ್ಲಿ !


ನಿನಗಿಷ್ಟವೋ ಕಷ್ಟವೋ ಕೇಳುವರಿಲ್ಲ ನಿನ್ನಯ ಮಾತಾ ಯಾರು ಇಲ್ಲಿ
ಎಲ್ಲರಿಗೋ ಅವರದೇ ಸ್ವಾರ್ಥ ಅವರದೇ ಪ್ರಪಂಚ !
ನಿನ್ನಯ ದನಿಯ ಆಲಿಸುವ ಪುರುಸೊತ್ತು ಎಲ್ಲಿದೆ ಅವರಲ್ಲಿ


ನಿನ್ನ ಕನಸುಗಳ ನುಂಗಿಕೊಂಡೆ ಬೇರೆಯವರ ಕಣ್ಣಾಗಿ ಬಾಳಬೇಕು ನೀನಿಲ್ಲಿ
ಇಲ್ಲದೆ ಹೋದರೆ ಹುಚ್ಚು ಪ್ರಪಂಚ ಕೊಲ್ಲುವುದು ನಿನ್ನ ಚುಚ್ಚು ಮಾತಿನಲ್ಲಿ !
ಗೆಳತಿ ಇಂಥ ಜನರ ನಡುವೆ ನಿನ್ನ ಕನಸಿಗೆ ಬೆಲೆ ಸಿಗುವುದಾದರೂ ಎಲ್ಲಿ ?


ಬಾಲ್ಯದಲಿ ನೀ ಕಟ್ಟಿ ಕೊಂಡ ಸುಂದರ ಕನಸುಗಳು ಇಂದು ಏನಾದವು
ಅಪ್ಪ ಅಮ್ಮ ಅಣ್ಣ ತಂಗಿ ತಮ್ಮ ಇವರ ಸುಖ ನೆನೆದು ಅವು ಕರಗಿ ಹೋದವು
ಹಚ್ಚಿಕೊಂಡ ಮೆಚ್ಚಿಕೊಂಡ ಬದುಕು ಅಪ್ಪಿಕೊಂಡ ಪ್ರೀತಿ ಎಲ್ಲ ಮರೆತು ಹೋದೆವು
ಇನ್ನೊಬ್ಬರ ಖುಷಿಗೆ ನಿನ್ನ ಕನಸುಗಳು ಚೂರಾದವು


ಸ್ವಾತಂತ್ರವಿಲ್ಲ ಗೆಳತಿ ನಿನಗೆ ನಿನ್ನ ಆಯ್ಕೆಗೆ ! ಅವೆಲ್ಲ ಇದೆ ಅಕ್ಷರದ ರೂಪದಿ
ಕೊಚ್ಚಿ ಕೊಳ್ಳುವರು ಬಡಾಯಿ ! ಸ್ತ್ರಿ ಸಮಾನತೆಗೆ
ಹುಚ್ಚಿ ನಂಬಬೇಡ ಅದನ್ನ ! ಅದು ಹೂವಿಡುವ ಮಾತು ನಿನ್ನ ಕಿವಿಗೆ
ಕಟ್ಟಬಲ್ಲವರು ಯಾರು ಘಂಟೆಯ ಬೆಕ್ಕಿನ ಕೊರಳಿಗೆ ?

ನೆಪಕ್ಕಾದರೂ ಒಮ್ಮೆ ಅವನೆಲ್ಲ ನೆನೆದು ಮನದುಂಬಿ ನಕ್ಕು ಬಿಡು ಗೆಳತಿ
ಏಕೆಂದರೆ ಬದುಕು ಇರುವುದೇ ಈ ರೀತಿ !

12 February 2011

ಭಾವನೆಗೊಂದು...


ಪ್ರೀತಿಯ,

ಗೆಳೆಯ/ಗೆಳತಿಯರೆ,


ನಿಮಗೆ.. ಈ ಚಿತ್ರವನ್ನು.. ನೊಡಿ... ಎನು ಅನಿಸುತ್ತಾ.. ಇದೆ ಎಂದು... ಬರೆಯಿರಿ... ಯಾಕೆಂದರೆ, ಅವರವರ ದ್ರಷ್ಟಿಯಂತೆ, ಅವರವರ ಮನೊಬಾವವು ಬೇರೆ....  ಒಂದು ಚಿತ್ರಕ್ಕೆ ಎಶ್ಟು ಮುಕವಿದೆ, ಎಂದು ತಿಳಿಯೊಣ...
ಎಲ್ಲರೂ ಸಹಕರಿಸಿರಿ.


ನಿಮ್ಮಪ್ರೀತಿಯ

10 February 2011

ಮೋಡಿಯ ಮಾಡಿದ ಹುಡುಗಿ

ಮುಂಜಾನೆಯಲ್ಲೊಂದು ದಿನ ! 
ಮೋಡಿಯ ಮಾಡಿದ ಹುಡುಗಿ !
ಕಣ್ಣ ಅಂಚಿನಲಿ ಸಾವಿರ ಕನಸು ಹುಟ್ಟಿಸಿದ ಬೆಡಗಿ !
ದಿನ ನಿತ್ಯದ ಜಂಜಾಟದಲಿ ! 
ಕಟ್ಟಿಕೊಂಡ ಬದುಕನು ಅರಸುತ !
ಕಾಣದ ದೇವರನು ಹುಡುಕುತ !
ಅಲೆದು ಅಲೆದು ಕೇಳಿದ್ದೆ ಒಂದು ಪ್ರಶ್ನೆ ?
ಅವಳು ಯಾರೆಂದು ? 
ಅದಕ್ಕೆ ಬಂದ ಉತ್ತರ!
ಅವಳು ನೀ ಬಯಸಿದರೆ ನಿನ್ನ ಉಸಿರೆಂದು !
ನಿನ್ನ ಕನಸಿನರಮನೆಯ ದೇವತೆಯೆಂದು !
ಕಟ್ಟಿಕೊಟ್ಟರೆ ಬದುಕು ಅವಳೇ ನಿನ್ನ ಬದುಕೆಂದು !
ಕನಸನು ನನಸು ಮಾಡಲು 
ಬಂದ ನಿನ್ನ ಕಾವ್ಯ ಕನ್ನಿಕೆಯೆಂದು !
ಆದರೂ ಅರಿವಾಗಲಿಲ್ಲ !

 ಹುಚ್ಚು ಮನಕೆ ಅವಳು ಯಾರೆಂದು !
ಅದರ ಅರಿವು ನನಗೆ ಆಗುವುದೆಂದು 

21 January 2011

ಆತ್ಮಗಳಾಚೆಯ ಲೊಕದಲಿ ನಾನು

ಕಾದು ಕುಳಿತ ರಾತ್ರಿಗಳಲಿ..
ಹಾಡಿ ಮರೆಥ ರಾಗಗಳಲಿ..
ಅಸ್ಪಸ್ಟವಾಗಿ.. ಯಾರೊ ನ್ರಥಿಸುವ ಗೆಜ್ಜೆ ನಾಧ ಕೆಳಿದರೂ ಅದರ ಮೂಲ ಹುಡುಕಲು ನಾನು ಇನ್ನೂ  ವಿಫಲೆ .


ಹುಮ್... ಹೌದು. 
ಕೆಲವೊಮ್ಮೆ ಹೀಗೆನೆ ಜೀವನ.. 
ನಮಗೆ ಅನಿಸುವುದಕ್ಕಿಂತಲೂ ಮಿಗಿಲಾಗಿದೆ. 
ನಮ್ಮ ಅನುಬವಗಳಿಗಿಂತಲೂ ಮಿಗಿಲಾಗಿ ಎನೊ ಆಗಿದೆ.  
ದೇಹದ ಮೂಲ ತಾಯಿಯ ಗರ್ಬವಿರಬಹುದು, ಆದರೆ, 
ನಮ್ಮ ಆತ್ಮದ ಮೂಲ ಎಲ್ಲಿ? ವರುಶಗಳಿಂದ ನಮ್ಮ ಜೊತೆ ಇರುವ ನಮ್ಮ ಆತ್ಮದ ಮೂಲ ನಮಗೆ ಗೊತ್ತಿಲ್ಲ. 
ನಮ್ಮ ಉಸಿರು ನಮ್ಮ ಜೊತೆ ಇರೊ ವರೆಗೆ ಆ ಅತ್ಮ ನಮ್ಮ ಜೊತೆಗಿರುತ್ತದೆ, ಆನಂತರ ಅಧು ಅಗಾದದಲೆಲ್ಲೊ ಅಡಗಿ ಹೊಗುತ್ತದೊ ಇಲ್ಲಾ ಮರು ಜನ್ಮವನ್ನು ತಾಳಲೊಸ್ಕರ, ಇನ್ನೊಂದು ದೆಹವನ್ನು ಹುಡುಕ್ಕುತ್ತದೊ? ಗೊತ್ತಿಲ್ಲಾ..


ಆದರೂ ಆತ್ಮದ ಆಬಾಸದಲಿ ನಮಗೆ ನಮ್ಮ ಮೆಲೆ ಹಿಡಿತವನ್ನು ಕೆಲವೊಮ್ಮೆ ಕಳೆದು ಕೊಳ್ಳಬೆಕಾಗುತ್ತದೆ... ದು:ಖ ಬಂದರೆ ನಮ್ಮ ದೆಹ ಸ್ಪಂದಿಸ ಬೆಕಾಗುತ್ತದೆ. ಹಾಗೆನೆ ನಾವು ನಮ್ಮ ದೇಹದ ಆಸೆಗಳಿಗೊಸ್ಕರ ನಮ್ಮ ಆತ್ಮವನ್ನು ನೊಯಿಸಬೆಕಾಗುತ್ತದೆ..

ನಮ್ಮ ತನವನ್ನು ನಾವು ಮರೆಯೊ ನೂರಾರು ಸನ್ನಿವೆಶಗಳು, ನಮಗೆ ಎಧುರಾಗುತ್ತಾನೆ ಇರುತ್ತದೆ, ಆವಾಗಲೆಲ್ಲಾ ಯಾವುಧೊ ಒಂದು ಶಕ್ಥಿ ನಮ್ಮ ಜೊತೆಗಿದ್ದು ನಮ್ಮ ಮುನ್ನೆಡೆಸುತ್ತದೆ.. ಅದನ್ನು ನಾವು ತಿಳಿಯಲು ಕೆಲವೊಮ್ಮೆ  ತುಂಬಾ ತಡವಾಗುತ್ತದೆ.

ನಮಗೆ ಎಲ್ಲರಿಗೂ ಗೊತ್ತಿರುವ್ಚ ಆದರೆ ಅನುಬವವಿಲ್ಲದ ಒಂದು ಪದ, ಇಲ್ಲ ಒಂದು ಕರ್ಮ, ಇಲ್ಲ ಒಂದು ಅಬಾಸ, "ಮರಣ". ನಮಗೆಲ್ಲಾ ನಮ್ಮೆ ಕಣ್ಣೆ ಬಯ ಕೊಡೊ ವಸ್ತು.. ಕಣ್ಣು ಮುಚ್ಹಿದರೆ, ನಮಗೆ ಎನು ಕಾಣಿಸದು. ಆವಗ ಬಯ ಸ್ವಲ್ಪ ಮಟ್ಟಿಗಾದರೂ ಕಡಿಮೆ ಅನಿಸಬಹುದು.. ಹಾಗೆ ನಮ್ಮ ಮರಣ ಕೂಡ ಕಣ್ಣು ಮುಚ್ಚಿಯೆ..

 ನಾವು ಮಾಡಿರೊ ಎಲ್ಲ ಕಾರ್ಯಗಳ ಪಲ ನಾವು ಬದುಕಿರುವಾಗಲೆ, ನಾವು ಅನುಬವಿಸದೆ ಇದ್ದರೆ, ನಮ್ಮ ಮರಣದ ಮೆಲೂ ನಮ್ಮ ಬೆಂಬಿಡದೆ ಕಾಡುತ್ತದೆ. ನಮ್ಮ ಕರ್ಮ ಮುಗಿಯುವ ತನಕ ನಮ್ಮ ದೇಹ ಮತ್ತು ಆತ್ಮ ತೊಂದರೆಗಳನ್ನು ಅನುಬವಿಸಲೆ ಬೇಕಾಗುತ್ತದೆ.,

ನಾವು ಬದುಕಿರಬೆಕಾದರೆ, ನಮ್ಮ ತೊಂದರೆಗಳಲಿ.. ನಮ್ಮ ಜೊತೆ ಕೈ ಜೊಡಿಸಲು ಅನೆಕರಿರುತ್ತಾರೆ, ಆದರೆ ನಮ್ಮ ಮರಣದ ನಂತರ ವಾದರೆ, ನಮ್ಮ ಜೊತೆ ಯಾರು ಇಲ್ಲ. ಬುದುಕಿರುವಾಗ ಮಾಡಿರುವ ಎಲ್ಲ ಪಾಪ ಪುಣ್ಯಗಳ ಫಲ ಮಾತ್ರ. ಒಳ್ಳೆದು ಮಾಡಿದರೆ ಒಳ್ಳೆತನ ನಮ್ಮ ಕಾಪಾಡುತ್ತದೆ, ಕೆಟ್ಟದಾಗಿದ್ದರೆ, ಫಲ  ಕೂಡ ನಕಾರಾತ್ಮಕ. ಅವಾಗ ನಮ್ಮ ಜೊತೆ ಯಾರೂ ಇಲ್ಲ

 ನಮ್ಮ ಆತ್ಮದ ತೊಂದರೆಗಳು.. ನಮ್ಮ  ಮನೆಯವರಿಗೆ  ತಾಗದಿರಲು, ಅವರು ಪೂಜೆಗಳನ್ನು ಮಾಡಿ, ನಮ್ಮನ್ನು ಬಂದಿಸಿಡುತ್ತಾರೆ, ಆವಗ ಆ ಒಂದು ಅವಸ್ತೆ, ತುಂಬಾ ಹೀನಾಯವಾಗಿರುತ್ತದೆ,

ಇತ್ತ ಮುಗಿದ ಮಾನವ ಜನುಮ, ಅತ್ತ ಮುಗಿಯದ ಕರ್ಮಗಳ ಪುಟ, ಮತ್ತೊಂದು ಜನ್ಮ ಸಿಗುವ ವರೆಗಿನ .. ತೊಳಲಾಟ..  ಎಲ್ಲಾ ಮುಗಿಧು ಇನ್ನೊಂದು  ಮರು ಜನ್ಮ ಸಿಕ್ಕಿದರೆ, ಮತ್ತೆ ನಾವು ನಮ್ಮ ಹಳೆ, ಜನ್ಮದ ಮೂಲ ಮರೆತಿರುತ್ತೆವೆ, ಆತ್ಮ ಅದನ್ನು ನೆನೆಪಿಸುವುದಿಲ್ಲ. ಅದು ಯಾವಗ ಅಂದರೆ ಮತ್ತೆ ನಾವುಗಳು ಆತ್ಮ ವಾದಗ ಮಾತ್ರ.....

ಈಗ ನೀವೆ ಹೆಳಿ ಆತ್ಮಗಳಾಚೆ ಇನ್ನೊಂದು ಜಗತ್ತು ಇದೆಯಾ? ಕೋಟಿ ಆತ್ಮಗಳು.. ಇನ್ನೂ ಕರ್ಮ ಮುಗಿಯದೆ, ಅಲೆಯುತ್ತಾ ಇದೆಯಾ? ಇದೆ.. ಮರಣದಾಚೆ, ನಾವು ಯಾರು ವಿಷ್ಣು , ಶಿವ, ಜಿಸಸ್, ಅಲ್ಲಾಹ್  ಯಾರನ್ನೊ ನೂಡುದಿಲ್ಲಾ.. ಕಾರಣ.. ಅವರುಗಳು ಆತ್ಮಗಳಾಚೆಯ ಮತ್ತೊಂದು ಲೊಕದಲ್ಲಿ... ಅಲ್ಲಿ ತನಕ ನಮ್ಮ ಮಾನವ ಜನ್ಮಗಳಿಗೆ ಪ್ರವೆಶವಿಲ್ಲ.. 

20 January 2011

ವೇಷಗಳ ಒಕುಳಿ



 ನಾಲ್ಕು ದಿನದ ಜೀವನದಾಟದಲಿ
 ನಾನ್ನೂರು ವೇಷಗಳು ಸಾಕಾ?

 ನಗುವಿನ ಒಂದು ವೇಷವಾದರೆ,
 ಕಣ್ಣೀರಿನ ಇನ್ನೊಂದು ವೇಷ..

 ಮುಗಿಸಿದ ಪಾತ್ರಗಳ ನಗ್ನ ಮುಕಗಳು..
 ನಮ್ಮ ನೊಡಿ ಹೀಯಾಳಿಸಿ ನಗುವಾಗಲು

 ಕಣ್ಣಂಚಲಿ ಜಿನುಗುವ ಕಣ್ಣ ಹನಿಯ
 ಒರೆಸೊ, ಹೊಸವೇಷದ ಬಟ್ಟೆಯ ತುಂಡು.

ಆಡಿ ಮುಗಿಸಿದ ಒಂದು ವೇಷ,
ಆಡಲು ಬಾಕಿಯಿರೊ ಇನ್ನೊಂದು ವೇಷ...

 ಶೂನ್ಯವಾದ ವೇದಿಯಲಿ.. ಎಕಾಂಗಿಯಾಗಿ
ಅಭಿನಯಿಸುವಾಗ ನಮ್ಮ ಜೊತೆ ನಮ್ಮ ನೆರಳು ಮಾತ್ರ...

13 January 2011

ನಕ್ಷತ್ರಗಳನ್ನು ಪ್ರೀತಿಸಿದ ನನ್ನ ಗೆಳತಿ




ಕನಸುಗಳ ಜೊತೆ ಅವಳು ಗೆಳೆತನ ಬೆಳೆಸಿದ್ದು ಎಕಾಂತತೆಯಿಂದ ಪಾರಗಲಿರಬಹುದು, ಇಲ್ಲದಿದ್ದರೆ ಅವಳ ಆ ಸ್ವಬಾವ ಇರಬೆಕು ಎಕಾಂಗಿಯಾಗಿ ಕುಳಿತಿರುವಾಗ ಅವಳು ಎಕಾಂತತೆಯನ್ನರಿಯುತ್ತಿರಲಿಲ್ಲ.

 


"ಈ ಜೀವನ ಪೂರ್ತಿ ನಾನಿಲ್ಲಿ ಒಂಟಿಯಾಗಿರ
ಲು ಬಯಸುತ್ತೆನೆ.
ತುಂಬಿರುವ ನಿಶಬ್ದತೆ ದೇವರು ನನಗೆ ಕೊಟ್ಟಿರೊ ವರವಾದರೆ,ಈ ಲೋಕದ ಎಲ್ಲ ಕಶ್ಟಗಳನ್ನು ದೇವರು ನನಗೆ ಕೊಟ್ಟರೆ 
ನಾನಿಲ್ಲಿಒಬ್ಬಳೆ ಕುಳಿತು ಅಳಲು ಸಂತೋಷ ನನಗೆ". 


ಅಂತ ಅವಳ ಡಯರಿಯ ಹಾಳೆಗಳಲಿ ಗೀಚಿರುವುದು ನಾನು ನೋಡಿದ್ದುಂಟು.ಆ ಡಯರಿ, ಮತ್ತು ಅವಳ ಆ ಕೋಣೆ, ಅವಳಿಗೆ ತುಂಬಾ ಪ್ರಿಯವಾಗಿತ್ತು!!!!! ಅದೆ ಅವಳ ಲೊಕವಾಗಿತ್ತು.


"ನನಗೂ ತಿಳಿಯದ ನನ್ನ ಮನಸಿನ ಮೂಲೆಯಲ್ಲಡಗಿರುವ ಸಾವಿರಾರು ನೋವುಗಳು ಹಂಚಿಕೊಳ್ಳಲು ನಿನ್ನ ಈ ಹಾಳೆಗಳು ಮಾತ್ರ." 
ಅಂತ ಗೆಳತಿಗೆ ಅನ್ನೊಹಾಗೆ ಅವಳ ಡಯರಿಯ ಮೊದಲನೆ ಪುಟದಲಿ ಬರೆದಿದ್ದಳು.


ತುಂಬಿರುವ ಎಕಾಂತತೆಯಲಿ, ಅವಳು ಇಷ್ಟಪಡುವ ಅವಳನ್ನು ಇಷ್ಟಪಡುವ ಜನರಿರಬಹುದು ,ಅವರ ಜೊತೆಯಲೆಲ್ಲಾ ಅವಳು ಮಾತಡ್ತಾನೆ ಇರಬಹುದು,ಅವರು ಅವಳ ಜೊತೆನು..ಆದರೆ ವಾಸ್ತವದಲಿ ಅವಳು ಇವರ್ಯಾರ ಜೊತೆಯಲಿ ಮನಸು ಬಿಚ್ಚಿ ಮಾತಡಿರಲಿಕ್ಕಿಲ್ಲ.


ನಿಜವೇನಂದರೆ ಅವಳಿಗೆ ಅವರಲ್ಲಿ ಹಲವರನ್ನು ನೋಡಲು ಕೂಡ ಬಯ ಪಡ್ತಾ ಇದ್ದಳು ಅನ್ನೊ ವಿಶ್ಯ ಅವಳಿಗೆ ಅವರನ್ನ ನೊಡುವಾಗಲೆ ನೆನಪಿಗೆ ಬರುತ್ತಾ ಇತ್ತು.


ಹೀಗೆ ಎಲ್ಲರ ಜೊತೆ ಗೆಳೆತನ ಬೆಳೆಸಬೆಕು ಎಂದು ಅಸ್ಸೆ ಪಟ್ಟು , ಆದರೆ ಅವರ ಮುಂದೆ ಮಾತನಾಡಲಸಾದ್ಯವಾಗಿ, ತನನ್ಗೆ ಮಾತನಾಡಲು ಅಸಾದ್ಯವೆಂದು ತಿಳಿದ ಅವಳಿಗೆ ಕೊನೆಗೆ ಮೌನವೆ ಆಸರೆಯಾಯಿತು.


ಅವಳ ಮೌನ ಆರ್ದ್ರವಾಗಿತ್ತು.. ತನ್ನ ಮೌನ ಬಾಷೆಯನ್ನು ಪ್ರೀತಿಸೊ ಒಬ್ಬ ಪ್ರಿಯಕರನಿಗಾಗಿ ಅವಳು ಯಾವಗಲು ಆಸೆ ಪಡುತ್ತಾ ಇದ್ದಳು.. ತನ್ನ ಮನದ ಬಾವನೆಗಳಿಗೆ ಸ್ಪಂದಿಸುವಂತಹ ಒಬ್ಬ ಗೆಳೆಯ ಅವಳಿಗೆ ಸಿಕ್ಕಿದರೂ ಕೊನೆಗೆಕೆಯವಳು ಆ ಗೆಳೆಯನ ಮೌನದ ಬಾಷೆಯ ಪ್ರೀತಿಯನ್ನು ಕಾಣದವರ ತರಹದಲ್ಲಿ ನಟಿಸಿ ಆ ದಳವನ್ನುದುರಿಸಿದಳೆಂದು ನನಗಿನ್ನೂ ತಿಳಿಯದು. ಆದರೆ ಒಂದು ವಿಷಯ ಮಾತ್ರ ಸತ್ಯವಾಗಿತ್ತು.. ಅವಳಿಗೆ ಆ ಗೆಳೆಯ ತುಂಬಾ ಇಷ್ಟವಾಗಿತ್ತು.. ತುಂಬಾ...



ಜೀವನದ ವಸಂತಕಾಲವೆಂದರೆ ಯೌವ್ವನ. ಆ ವಸಂತಮುಗಿಯೊ ಮೊದಲೆ.. ಎಲೆಗಳನ್ನು ಹೂವುಗಳನ್ನು ಉದುರಿಸಿ, ಮರದಲಿ ಬರಿ ಒಣಗಿದ ಕೊಂಬೆಗಳನ್ನು ಮಾತ್ರ ಬಾಕಿಯಿರಿಸಿದ್ದು ನಾನು ನೋಡಿ ನಿಂತೆ.. ಕಾರಣವೇನೆಂದು ತಿಳಿಯೊ ಕೂತೂಹಲವಿದ್ದರು.. ನನ್ನ ಮನಸಿನ ಚಾಂಚಲ್ಯವನ್ನಡಗಿಸಿದೆ.


ಹುಣ್ಣಿಮೆಯಲಿಹರಿದುಬರುವ ಬೆಳದಿಂಗಳವಳಿಗೆ ಇಷ್ಟವಾಗುತ್ತಿರಲಿಲ್ಲ..
ಅಮವಾಸ್ಯೆಯ ಕಾರ್ಗತ್ತಲಿನಲಿ ಹೋಳೆಯುವ ಸ್ವರ್ಣ ನಕ್ಷತ್ರಗಳೆನಗೆ ಇಷ್ಟವೆಂದು ಬರೆದಿರುವ ಅವಳ ಡಯರಿಯ ಸಾಲುಗಳು ನನಗೆ ಅರ್ಥವಾಗಲಿಲ್ಲ.


ತುಂಬಾ ಕಾಲಗಳ ಬಳಿಕ ನನಗೆ ಸಿಕ್ಕಿದ ಕಾಗದವೋದಿ ತಿಳಿಯಿತು.. ಅವಳ ಆ ಮೌನ ಬಾಶೆಯ ಪ್ರಿಯಕರನಿಂದು ಅವಳಿಗಿಷ್ಟವಾಗಿರೊ ನಕ್ಷತ್ರಗಳ ಲೋಕದಲಿ ನಕ್ಶತ್ರಗಳ ಜೊತೆ ಸೇರಿ ಈ ಭೂಮಿಯ ಯಾತ್ರೆಯನ್ನು ಮುಗಿಸಿದ್ದಾನೆಂದು ತಿಳಿದಾಗ ಅವಳ ಡಯರಿಯ ಹಾಳೆಗಳನ್ನು ಮತ್ತೊಮ್ಮೆ ತಿರುವಿ ನೋಡಬೇಕೆಂದೆನಿಸಿತು.


ನಕ್ಷತ್ರಗಳೆಷ್ಟೆ ಶೊಭೆಯಲಿ ಮಿನುಗಿದರು ಅವಳು ಮೌನಿಯಾಗಿದ್ದಳು.. ಬೆಳದಿಂಗಳನ್ನು ಪ್ರೀತಿಸದೆ ಅಮವಾಸ್ಯೆಯ ಕತ್ತಲಿನ ನಕ್ಷತ್ರಗಳಳನ್ನು ಅವಳೆಕೆ ಪ್ರೀತಿಸುತ್ತಿದ್ದಳೆಂದು ನನಗಿನ್ನೊ ತಿಳಿದಿಲ್ಲ.. ಚಿಕ್ಕವಳಿರುವಾಗಲೆ ಕಳೆದುಕೊಂಡ ತನ್ನವರಿಗಾಗಿ.. ಇಲ್ಲ ಕಳದು ಹೋದ ತನ್ನ ಬಾಲ್ಯಕಾಲದ ಗೆಳೆಯನ ಪ್ರೀತಿಯನು ಆ ನಕ್ಷತ್ರಗಳ ಲೋಕದಲಿ ಹುಡುಕುತ್ತಾ ಇದ್ದಳೇನೊ?.


ತನ್ನ ಜನ್ಮದೋಶದ ಬಗ್ಗೆ ಅವಳ ಅಜ್ಜಿ ಅವಳಿಗೆ ಹೇಳುವಾಗ ಆವಳು ಎಷ್ಟೆ ತರ್ಕಿಸಿದರೂ.. ಮನಸಿನಲಿ ಕೋಲಾಹಲ ನಡೆಯುತ್ತಾ ಇತ್ತು.
ತನಗೆ ಬೇಕಾಗಿದ್ದ ತನ್ನವರನ್ನು ನಕ್ಶತ್ರಗಳ ಲೋಕದಲಿ ಸೆರಿಸಿದ್ದರಿಂದ ಇರಬಹುದು. 


ಅವಳಿಗೆ ನಕ್ಶತ್ರಗಳೆಂದರೆ ಪ್ರಣಯವಾಗಿತ್ತು.. ಅವಳ ಪ್ರೀತಿಯ ಪ್ರಿಯಕರ.. ನಕ್ಷತ್ರಗಳ ಲೊಕದಲಿ ಮಿನುಗು ತಾರೆಯಾಗಿ ಅವಳನ್ನ ನೋಡಿ ಮಿನುಗುತಿತ್ತೆನೊ.

 ಎಷ್ಟೆ ಅಗಲೋಣವೆಂದು ಶ್ರಮಿಸಿದರೂ ಅವಳ ಪ್ರಿಯಕರನಿಂದು ಅನಂತತೆಯಲೊಂದು ತಾರೆಯಾಗಿ.. ಅವಳ ಮನಸಿನಲ್ಲಿ ... ಮಿನುಗುತ್ತಾ ..

11 January 2011

ಸ್ನೇಹ,




















ಎರಡು ಕಣ್ಣುಗಳ ಸುಂದರ ಹೊಂಗಿರಣ ಈ ಸ್ನೇಹ,

ಎರಡು ದೇಹಗಳ ಒಂದೇ ರೂಪ ಈ ಸ್ನೇಹ,

ಎರಡು ಹೃದಯಗಳ ಸಮ್ಮಿಲನ ಈ ಸ್ನೇಹ.

ಪ್ರಕೃತಿಯ ಅತ್ಯದ್ಭುತ ಸೃಷ್ಟಿ ಈ ಸ್ನೇಹ,

ಸೃಷ್ಟಿಯ ಅತ್ಯದ್ಭುತ ರಹಸ್ಯ ಈ ಸ್ನೇಹ,

ಸಂಬಂಧವಿಲ್ಲದವರ ನಡುವಿನ ಅನುಬಂಧ ಈ ಸ್ನೇಹ,

ಯಾರೂ ಮರಯಲಾಗದ ಸುಂದರ ಅನುಭವ ಈ ಸ್ನೇಹ.

ನೂರಾರು ಬಯಕೆಗಳ ಸುಂದರ ಬೆಸುಗೆ ಈ ಸ್ನೇಹ,

ಸಾವಿರಾರು ಕನಸುಗಳ ಸಾಕ್ಷಾತ್ಕಾರ ಸ್ವರೂಪ ಈ ಸ್ನೇಹ,

ಲಕ್ಷಾಂತರ ಕಣ್ಣುಗಳ ಹುಡುಕಾಟ ಈ ಸ್ನೇಹ,

ಕೋಟ್ಯಾಂತರ ಮನಗಳ ಒಂದೇ ಕೂಗು ಸ್ನೇಹ ಸ್ನೇಹ ಸ್ನೇಹ

10 January 2011

ಇಂತಿ ನಿನ್ನ ಬೇಡವಾದ ಚಿಟ್ಟೆ

ನೋಡಿದೆ ನಾನೊಂದು ಬಣ್ಣದ ಚಿಟ್ಟೆ
ಅದನ್ನೇ ಹಿಡಿಯಲು ಆಸೆ ಪಟ್ಟೆ
ಹೋಗಿ ನೋಡಿದ ಮೇಲೆ ಒಮ್ಮೆ ಮಾತನಾಡಿಸಿ ಬಿಟ್ಟೆ
ಮಾತನಾಡಿಸಿದ ಮೇಲೆ ಇಷ್ಟ ಪಟ್ಟೆ
ಅದರಲ್ಲೇ ನನ್ನ ಜೀವ ಇಟ್ಟೆ
ಅದರ ಹಿಂದೆ ಹೋಗಿ ತುಂಬಾ ಕಷ್ಟ ಪಟ್ಟೆ
ಪಾಪ ಅದಕ್ಕೂ ತುಂಬಾ ಕಷ್ಟ ಕೊಟ್ಟೆ
ಮನಸಲ್ಲೇ ಅದನ್ನ ಬಚ್ಚಿಟ್ಟೆ
ನನ್ನುಸಿರೇ ಅದು ಎಂದು ಬಿಟ್ಟೆ
ಅದರಲ್ಲೇ ಹೃದಯಾನ ಒತ್ತಿಟ್ಟೆ
ತಿಳಿದು ನಾನು ಜಾರಿ ಬಿಟ್ಟೆ
ಜಾರಿದಾಗ ಮನಸ್ಸಿಗಾದ ಗಾಯ ಮುಚ್ಚಿಟ್ಟೆ
ಒಬ್ಬರೆದರು ಮಾತ್ರ ನೋವು ಬಿಚ್ಚಿಟ್ಟೆ
ಆಗ ತಿಳಿಯಿತು ಅದೊಂದು ಹಾರುವ ಚಿಟ್ಟೆ
ತಿಳಿದಾಗ ತುಂಬಾ ತುಂಬಾ ದುಃಖ ಪಟ್ಟೆ
ಹಾಗೋ ಹೀಗೋ ಅದನ್ನ ಮರೆಯಲಾಗದೆ  ನರಳಿ ಬಿಟ್ಟೆ
ಇಂತಿ ನಿನ್ನ ಬೇಡವಾದ ಚಿಟ್ಟೆ

ನೀನೇಕೆ ಬಂದೆ ನೆನಪೇ?










ನೆನಪೆ ನೆನಪಾಗಿ ಉಳಿಯದಿರು, 
ಮತ್ತೆ ಮತ್ತೆ ಬಂದು ನೀ ಕಾಡದಿರು,
ಕದಿಯಬೇಡ ನೀ ನನ್ನ ನಿದಿರೆಯ,
 ಮರೆಸಬೇಡ ನನ್ನ ಹಸಿವ.


ನೊಂದ ಮನಕ್ಕೆ ಮುಳ್ಳೇರೆಯಬೇಡ, ಇಲ್ಲದಿರೊ ನೆಮ್ಮದಿಯ ನೀ ಕದಿಯಬೇಡ.
ಹೋಗು ನೆನಪೆ ನೀ ದೂರ, 
ಬರಿದಾದ ಮನಕ್ಕೆ ಮತ್ತೆ ತಂದೆ ನೀ ಬರ.






ಬಂದರೆ ಮನಕ್ಕೆ ಇನೆಲ್ಲಿ ಇದೆ ಉಳಿಗಾಲ.
ಅಳುತ್ತಿರುವ ಮನಕ್ಕೆ ಸವಿ ನೆನಪುಗಳು ಏಕೆ,
ನೆನೆದು ನೆನೆದು ಅಳುತ್ತಲೇ ಇರುವ ಪರಿಸ್ಥಿತಿ ಬೇಕೇ.
ಬೇಡವೆಂದು ತಳ್ಳಿದರು ದೂರ, 


ಮತ್ತೇಕೆ ಇಲ್ಲಸಲ್ಲದ ನೆಪವೊಡ್ಡಿ ಬರುವೆ ನೀ ಹತ್ತಿರ,
ಎಲ್ಲ ಮರೆತು ನೆಮ್ಮದಿಯ ಹುಡುಕಲು ಹೋರಟ
 ಮನಸಿಗೆ ಬೇಡಿಯ ಹಾಕಿ ಮತ್ತೆ ಕರೆತಂದು 
ಕಣ್ಣಿರಿರಿಸುತ್ತಿರುವೆ ನೀ ನೆನಪೇ.


ಇರುವುದನೆಲ್ಲ ಹೊತ್ತು ಕೊಂಡು
 ಹೋದಳು ಉಸಿರೊಂದನ್ನ ಬಿಟ್ಟು ನನಗೆ,
ಇರುವುದೊಂದನ್ನ ಕದಿಯಲು 
ನೀನೇಕೆ ಬಂದೆ ನೆನಪೇ?