27 December 2012

ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ




ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ
ಅನಾವೃಷ್ಟಿಯಲ್ಲೂ ಸುರಿಯುತ್ತಿರುವೆ ನೀ ಮಳೆಯಾಗಿ.
ತಂಪಾದ ಧರೆ ,ದೊರೆಯಂತೆ ಕಂಡು
ತುಂಬಿಸಿಕೊಂಡಿವೆ ತನ್ನೆದೆಯ ತುಂಬಾ ಹಸಿರಿನಾ ಸಿರಿ.
ಉಸಿರಾಗಿ ಬರುವ ನೀನೊಂದು ಗಾಳಿ ,
ಸಿಹಿಸುದ್ದಿ ಉಲಿದು ,
ಅಲೆದಲೆದು ಬಂದು ನೆಲೆಸಿರುವೆ ನನ್ನಲ್ಲಿ .
ಕಣ್ಣಿಗೆ ಕಾಣುವ ಸುಂದರ ಮಳೆಬಿಲ್ಲು ನೀನು ,
ನುಣುಪಾದ ಮುಗಿಲು ಹಗಲಲ್ಲಿ ಹೊಳೆದೊಳೆದು
ಚಿತ್ತಾರ ಬಿಡಿಸಿವೆ ನನ್ನಲ್ಲಿ .
ಕಾಣುವೆನು ನಿನ್ನಲ್ಲಿ ಈ ಜಗವು ನನ್ನಲ್ಲಿ
ನಾನೆಂಥ ಧನ್ಯ ನೀನಿರಲು ಜೊತೆಯಾಗಿ

26 December 2012

ಭಂದೀಕಾನೆ

ಬಾವನೆಗಳ ಬಂದೀಕಾನೆಯಲೆನ್ನಾ
ಕೂಡಿಟ್ಟು.. ಎಲ್ಲಿರುವೆ ನೀ ಗೆಳೆಯಾ

ಕಾದಿರುವೆ ನಾ ನಿನಗೆಂದೆ ಎಳುಜನುಮ
ಬರದೆ ಹೂಗುವೆಯಾ ನೀ ನನ್ನರಮನೆಗೆ

ಮಂಜಿನ ಹನಿಗಳಿಂದ ಪೊಣಿಸಿದ ನನ್ನ
ರಕ್ಕೆಗಳು ಸಾಲದು ನಿನ್ನ ಬಳಿ ಬರಲು

ಅಂತರಂಗದ ಚಕ್ರವ್ಯೂಹವನು ಬೆದಿಸಿ
ಬರುವೆಯಾ ಆತ್ಮದ ಅರಮನೆಗೆ ಕರೆದೊಯ್ಯುವೆಯಾ

ಬರುವೆಯಾ ನೀ ಗೆಳೆಯಾ ಎನ್ನ ಬಿಡಿಸಲು
ಸೆರಿಸುವೆಯಾ ನಿನ್ನ ತೊಳಲೆನಾ ಓ ಗೆಳೆಯಾ?

15 November 2012

ಹೇಳಲಾಗದ ನೂರು ಭಾವ !

ಹೇಳಲಾಗದ ನೂರು ಭಾವ ! ಹೇಳಿ ಕೊಳ್ಳಲಾಗದ ವೇದನೆ !
ಏನೋ ಅರಿಯೆ ! ಮನದಲಿ ! ಸಂಕಟ !
ಯಾಕೆ ಹೀಗಾಯ್ತೋ ? ಏನಾಯ್ತೋ ? ಅರಿವಿಲ್ಲ !
ಹಚ್ಚಿಕೊಂಡ ಬದುಕು ! ಕನಸಾಗಿದೆಯಲ್ಲ !
ಕಟ್ಟಿ ಕೊಂಡ ಕನಸು ! ಇನ್ನು ಕೂಡ ನನಸಾಗಿಲ್ಲ !
ಬದುಕು ಇಲ್ಲರಿಗೂ ಹೀಗೆನಾ ? ಅಥವಾ ನಮಗೆ ಮಾತ್ರ ಹೀಗೆನಾ ?
ಒಪ್ಪಿಕೊಂಡ , ಹರಸಿಕೊಂಡ ಪ್ರೀತಿ ನಮದಾಗಲಿಲ್ಲ !
ನಂಬಿದವರು ನಮ್ಮ ನಂಬಿಕೆಯ ಉಳಿಸಿಕೊಳ್ಳಲಿಲ್ಲ !
ಅರಳಿದ ಪ್ರೀತಿ ! ಚಿಗುರುವ ಮುನ್ನ ಚಿವುಟಿದಿರಲ್ಲ !
ಅರಳಿದ ಹೂವು ! ಮುಡಿಗೆರುವ ಮುನ್ನ ಬಾಡಿಸಿದಿರಲ್ಲ !
ಎಷ್ಟೊಂದು ವಿಶ್ವಾಸ ನಂಬಿಕೆ ಪ್ರೀತಿಯಲಿ !
ಅದು ನೀಡಿದ ನೋವ ನಾ ಈಗ ಯಾರಿಗೆ ಹೇಳಲಿ !
ನಾವು ಹಚ್ಚಿಕೊಂಡವರು ! ನಮ್ಮ ನೆಚ್ಚಿ ಕೊಳ್ಳಲಿಲ್ಲ !
ನೆಚ್ಚಿಕೊಳ್ಳದೆ ಬಂದವರು ! ಬದುಕಾದರಲ್ಲ !
ಮನ ಮತ್ತೆ ಸಾವಿರ ಕನಸ ಕಟ್ಟುವುದು ತಪ್ಪಲಿಲ್ಲ !
ನಾ ಕಟ್ಟಿದ ಕನಸು ಎಂದು ನನಸಗುವುದೋ ಅರಿವಿಲ್ಲ !
ಹುಚ್ಚು ಮನ ! ಆ ಆಸೆಯೊಳಗೆ ಕಾಯುತಿದೆಯಲ್ಲ !
ಬರಬಹುದೇ ನನಗೂ ಒಂದಲ್ಲ ಒಂದಿನ ! ಗೊತ್ತಿಲ್ಲ !
ಪ್ರೀತಿಗಾಗಿ ! ದಿನ ಕಾಯುವುದು ತಪ್ಪಲಿಲ್ಲ !
ಏನ ಮಾಡಿದೆ ದೇವ ನಿನಗೆ ! ಅದರಲಿ ನನ್ನ ತಪ್ಪಿಲ್ಲ !
ಇಲ್ಲದ ! ಯೋಚನೆಯೊಳಗೆ ಮನ ಕೊರಗುತಿದೆಯಲ್ಲ !
ಬರಲಿ ! ಹಾಗೆಯೆ ! ಒಂದು ದಿನ !
ನನ್ನ ನಲಿವ್ಲಿಗೆ ! ನನ್ನ ಖುಷಿಗೆ ! ನಾನು ಕುಣಿದಾಡುವ ದಿನ !
ನನ್ನ ಪ್ರೀತಿ ನನ್ನನೋಪ್ಪಿಕೊಂಡ ದಿನ !
ಕಾಣುವೆ ಭುವಿಯಲಿ ! ಸ್ವರ್ಗವ ಆ ದಿನ ಹೇಳಲಾಗದ ನೂರು ಭಾವ ! ಹೇಳಿ ಕೊಳ್ಳಲಾಗದ ವೇದನೆ !
ಏನೋ ಅರಿಯೆ ! ಮನದಲಿ ! ಸಂಕಟ !
ಯಾಕೆ ಹೀಗಾಯ್ತೋ ? ಏನಾಯ್ತೋ ? ಅರಿವಿಲ್ಲ !
ಹಚ್ಚಿಕೊಂಡ ಬದುಕು ! ಕನಸಾಗಿದೆಯಲ್ಲ !
ಕಟ್ಟಿ ಕೊಂಡ ಕನಸು ! ಇನ್ನು ಕೂಡ ನನಸಾಗಿಲ್ಲ !
ಬದುಕು ಇಲ್ಲರಿಗೂ ಹೀಗೆನಾ ? ಅಥವಾ ನಮಗೆ ಮಾತ್ರ ಹೀಗೆನಾ ?
ಒಪ್ಪಿಕೊಂಡ , ಹರಸಿಕೊಂಡ ಪ್ರೀತಿ ನಮದಾಗಲಿಲ್ಲ !
ನಂಬಿದವರು ನಮ್ಮ ನಂಬಿಕೆಯ ಉಳಿಸಿಕೊಳ್ಳಲಿಲ್ಲ !
ಅರಳಿದ ಪ್ರೀತಿ ! ಚಿಗುರುವ ಮುನ್ನ ಚಿವುಟಿದಿರಲ್ಲ !
ಅರಳಿದ ಹೂವು ! ಮುಡಿಗೆರುವ ಮುನ್ನ ಬಾಡಿಸಿದಿರಲ್ಲ !
ಎಷ್ಟೊಂದು ವಿಶ್ವಾಸ ನಂಬಿಕೆ ಪ್ರೀತಿಯಲಿ !
ಅದು ನೀಡಿದ ನೋವ ನಾ ಈಗ ಯಾರಿಗೆ ಹೇಳಲಿ !
ನಾವು ಹಚ್ಚಿಕೊಂಡವರು ! ನಮ್ಮ ನೆಚ್ಚಿ ಕೊಳ್ಳಲಿಲ್ಲ !
ನೆಚ್ಚಿಕೊಳ್ಳದೆ ಬಂದವರು ! ಬದುಕಾದರಲ್ಲ !
ಮನ ಮತ್ತೆ ಸಾವಿರ ಕನಸ ಕಟ್ಟುವುದು ತಪ್ಪಲಿಲ್ಲ !
ನಾ ಕಟ್ಟಿದ ಕನಸು ಎಂದು ನನಸಗುವುದೋ ಅರಿವಿಲ್ಲ !
ಹುಚ್ಚು ಮನ ! ಆ ಆಸೆಯೊಳಗೆ ಕಾಯುತಿದೆಯಲ್ಲ !
ಬರಬಹುದೇ ನನಗೂ ಒಂದಲ್ಲ ಒಂದಿನ ! ಗೊತ್ತಿಲ್ಲ !
ಪ್ರೀತಿಗಾಗಿ ! ದಿನ ಕಾಯುವುದು ತಪ್ಪಲಿಲ್ಲ !
ಏನ ಮಾಡಿದೆ ದೇವ ನಿನಗೆ ! ಅದರಲಿ ನನ್ನ ತಪ್ಪಿಲ್ಲ !
ಇಲ್ಲದ ! ಯೋಚನೆಯೊಳಗೆ ಮನ ಕೊರಗುತಿದೆಯಲ್ಲ !
ಬರಲಿ ! ಹಾಗೆಯೆ ! ಒಂದು ದಿನ !
ನನ್ನ ನಲಿವ್ಲಿಗೆ ! ನನ್ನ ಖುಷಿಗೆ ! ನಾನು ಕುಣಿದಾಡುವ ದಿನ !
ನನ್ನ ಪ್ರೀತಿ ನನ್ನನೋಪ್ಪಿಕೊಂಡ ದಿನ !
ಕಾಣುವೆ ಭುವಿಯಲಿ ! ಸ್ವರ್ಗವ ಆ ದಿನ

09 April 2012

ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ

ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ
ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ
ಹುಟ್ಟು ಕುರುಡಾದ ಪ್ರಪಂಚ ನಾನ್ಹೇಗೆ ಕಣ್ಣು ತೆರೆಯಲಿ
ಮೌನದಲ್ಲಿ ಮುಳುಗಿದ ಮನ ಮಾತನ್ನೆಲ್ಲಿಂದ ಆಡಲಿ
ಕಿತ್ತು ತಿನ್ನುವ ಜಗ ನಾನ್ಹೇಗೆ ಹಂಚಿ ತಿನ್ನಲಿ

ಇಚ್ಚೆಯನರಿಯದೆ ಬದುಕುವ ಜನ ಇವರ ಜೊತೆ ನಾನ್ಹೇಗೆ ಬಾಳಲಿ
ಪಿಸು ಮಾತಾನರಿಯದ ಮನ ಇವರಿಗೆ ಹೃದಯವನ್ನು ಹೇಗೆ ನೀಡಲಿ
ಆಡಲು ದನಿಯಿಲ್ಲ , ಮಾತಿಗೆ ಬೆಲೆಯಿಲ್ಲ , ಇವರ ನಾನೇನೆಂದು ಕೇಳಲಿ
ಬದುಕಿನ ಅರ್ಥ ಗೊತ್ತಿಲ್ಲ , ಇವರ ಜೊತೆ ನಾನ್ಹೇಗೆ ಬದುಕನುಡುಕಲಿ!

ಅರಿತು ಕೊಂಡು ಆರಿಸಿ ಕೊಂಡ ಸ್ನೇಹ ಉಳಿಯಲಿಲ್ಲ ಯಾರ ದೂರಲಿ
ನಂಬಿಕೆಯಿಟ್ಟು ಹಂಚಿಕೊಂಡ ಭಾವನೆಗೆ ಮೋಸ ಮಾಡಿದರೆ ಯಾರ ನಂಬಲಿ
ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿಯಾದರೆ ನಾನೇನು ಮಾಡಲಿ
ನಂಬಿಕೆ ಇಲ್ಲ ಜಗ , ಜನ ನಾನ್ಯಾರ ನಂಬಲಿ
ಒಡಲಿಗೆ ಕೊಳ್ಳಿ ಇಟ್ಟು ಹೊರಟವರ ಏನೆಂದು ಕರೆಯಲಿ !

ಏನೆಲ್ಲಾ ಮೇಲೆ ನಮಗೆ ಪ್ರೀತಿಯ ನೀಡಿದರೂ ಒಳಗಿನ ಮುಖ ಹೇಗೆ ತಿಳಿಯಲಿ
ಸಂಬಂಧಗಳ ಬೆಲೆ ಗೊತ್ತಿರದವರಲ್ಲಿ ಸಂಬಂಧವ ಹೇಗೆ ಬೆಳೆಸಲಿ
ಅನಿರಿಕ್ಷಿತವಾಗಿ ದೊರೆತವರ ನಾನ್ಹೇಗೆ ಅನುಮಾನಿಸಲಿ
ಒಪ್ಪಿಕೊಂಡ ಸ್ನೇಹದಲ್ಲಿ ದೋಷವನೆಲ್ಲಿಂದ ಕಾಣಲಿ
ಬೆನ್ನಿಗೆ ಇರಿದು ಹೋದವರ ನೆನೆದು ಏನೆಂದು ಕರೆಯಲಿ !..

ಮೌನದಿ ರೋಧಿಸುತಿದೆ ಮನ ನೆಮ್ಮದಿಯನ್ನೆಲ್ಲಿ ಹುಡುಕಲಿ
ವಂಚಿಸಿ ಹೋದವರ ನೆನೆದು ಏನು ಪ್ರಯೋಜನವಿಲ್ಲ ಏನು ಮಾಡಲಿ
ಚಿತ್ರ ವಿಚಿತ್ರ ಜನರ ಪ್ರಪಂಚ ಇಲ್ಲೇ ಬದುಕಬೇಕು ಅವಸರದಲಿ !

27 March 2012

ಮೀಟಲು ಆಗುವುದಿಲ್ಲ ! 
ಕಲ್ಲಿನ ವೀಣೆಯನು !
ಅರಿಯಲು ಸಾದ್ಯವಿಲ್ಲ ! 
ಮನಸಿನ ಭಾವನೆಯನು !
ಕಂಡು ಹಿಡಿಯಲು ಆಗುವುದಿಲ್ಲ !
 ಮೀನಿನ ಹೆಜ್ಜೆಯನು !
ಹಾಗೆಯೆ ! 
ಅನುಭವಿಸಬೇಕು ! 
ಸ್ನೇಹದ ! ಆನಂದವನು !
ವರ್ಣಿಸಲು ಸಾದ್ಯವಿಲ್ಲ ! 
ಸ್ನೇಹವೆಂದರೆ ಏನೆಂದು !
ಅನುಭವಿಸಬೇಕು ! 
ಆನಂದಿಸಬೇಕು ! 
ಕೇಳಬೇಡ ಏಕೆಂದು !
ಕಾಣದ ದೇವರ ನೆನೆದು ! 
ಅವನ ದಯೆ ಕೋರುವ ಜನ ನಾವು !
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !
ಭಾವಿಸುವುದಿಲ್ಲ ಏಕೆ ! 
ಸ್ನೇಹ ಒಂದು ಮದುರ ಸಂಬಂದವೆಂದು !
ಕಟ್ಟುವಿರೆಕೆ ! ಅದಕೂ ! 
ಸಲ್ಲದ ಕಥೆಗಳನು !ಬದುಕು ಅಂದರೆ ! 
ಏನೆಂದು ! ಅರಿಯಬೇಕಿದೆ ನಾವಿಂದು !
ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ !
 ಆದರೆ ಸುಮ್ಮನೆ ಅಳಿಸಬೇಡಿ !
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! 
ಆದರೆ ಸುರಿಯುವ ಹಾಗೆ ಮಾಡಬೇಡಿ !
ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !
ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !
ಜಗದಲಿ ! ಕಣ್ಣಿಲ್ಲದ್ದವರಿಗಿಂತ !
 ಕಣ್ಮುಚ್ಚಿ ಕುಳಿತವರೇ ಹೆಚ್ಚ್ಚು !
ಕನಸು ಕಾಣುವವರಿಗಿಂತ !
 ಕನಸು ಕಳೆದು ಕೊಂಡ ವರೇ ಹೆಚ್ಚು !
ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು

16 March 2012

ಅವ್ವಳೆಂಬ ದೈವ

ಓ ಮಲ್ಲಿಗೆ, ನೀ ಮೆಲ್ಲಗೆ

ಓ ಮಲ್ಲಿಗೆ, ನೀ ಮೆಲ್ಲಗೆ

ಬಾಡುತಿರುವೆ ಯಾಕೆ..?

ನಿನ್ನ ಮುಡಿಯಲು ನನ್ನ

ರಾಣಿಯಿಲ್ಲವೆಂದು ಕೊರಗುವೆಯೇಕೆ..?

ಚಿಂತೆ ಮಾಡದಿರು ಮಲ್ಲಿಗೆ,

ನನ್ನವಳು ಬರುವಳು ತಪ್ಪದೆ

ಮುಂದಿನ ಹುಣ್ಣಿಮೆಯೊಳಗೆ..!!


ಓ ತಿಂಗಳೇ, ಬೆಳದಿಂಗಳೇ,

ನೀ ಮೋಡದ ಮರೆಯದೆಯೇಕೆ..?

ನನ್ನ ಹೃದಯದ ಪಟ್ಟದ ರಾಣಿ,

ಇರುವಳು ತವರೂರಿನಲಿ,

ಅವಳಿಗೆ ಪದೆಪದೆ ನನ್ನದೇ ಕನವರಿಕೆ.

ಮಲಗಿಸು ಅವಳನ್ನು ಹೇ ಚಂದ್ರಮ,

ನನ್ನ ಕನಸುಗಳೇಲ್ಲವನೂ ಹೊತ್ತು

ಹೊದಿಸಿ, ನೀನಾಗು ಬೆಳದಿಂಗಳ ಹೊದಿಕೆ.


ಯಾಕಾದರೂ ಬಂದಿತೋ,

ಈ ಆಷಾಡ ಮಾಸ
.
ನನ್ನವಳು ಇರದ ಮನೆ,

ಈಗ ಅದಾಗಿದೆ ಕಾಲಕಸ.

ಮನ್ಮಥನ ಶಾಪವೋ ಏನೋ
,
ತಾಳಲಾರೆ ನಾ ಈ ವಿರಹ.

ಕಾಯಿಸದಿರು ನಲ್ಲೆ ಇನ್ನು,

ಬೇಗ ಬಂದುಬಿಡು ಸನಿಹ.