26 January 2015

ಗೆಳತೀ


ಗೆಳತೀ ಎಲ್ಲಿ ಮರೆಯಾದೆ ನೀ...
ನೊವ ಕೊಡಲೆಂದೆ.. ಬಂದೆಯಾ

ಕಾಡುದಾರಿಯ ಶೂನ್ಯತೆ ತುಂಬಿದೆ
ಕಿರುದೀಪವಾಗಿ ಬಳಿಬಾರದೆ ಒಮ್ಮೆ...

ನಿನ್ನ ನಗುವಲ್ಲಿ ಮರೆತ ನನ್ನ ನೊವುಗಳು..
ನಿನ್ನ ನೆನಪಲ್ಲಿ... ಮರುಕಳಿಸುತಿದೆ...

ಮರುಬೂಮಿಯಲಿ ಕೆಳೊ...ರೊದನಂತೆ..
ಕೆಳಿಸುತಿದೆಯಾ ನನ್ನೀ ಮನದ ಗಾಯನಾ...

ಸಪ್ತವರ್ಣಗಳಲಿ ಅಚ್ಚಳಿಯದೆ..
ಬರೆದಿಡುವೆ ನನ್ನೆದೆಯಲಿ... ನಿನ್ನ ಹೆಸರನು..

ಒಡಲಲಿ ಹತ್ತಿರೂ ಪ್ರೀತಿಯ ಜ್ವಾಲೆಯನಾರಿಸಲು
ಬೊಗಸೆ ಕಣ್ಣೀರು ಸಾಲದು ಗೆಳತಿ....

ಹ್ರುದಯದ ನವಿರು ಬಾವನೆಗಳ ಗೀಚಿ
ಮಾಯಾವಾದೆ ನೀ ಮೆಲ್ಲನೆ.... ಮೆಲ್ಲನೆ...

ನಿನ್ನೆಲ್ಲ ಪ್ರಶ್ನೆಗೂ..ನನ್ನ ಉತ್ತರ



ಹತ್ತಾರು ಕಾರಣ ಕೊಡುವೆ ನೀನು ನನ್ನನ್ನು ದೂರ ತಳ್ಳಲು ಒಂದೇಯೊಂದು ಭಾವನೆ ಸಾಕು ನಂಗೆನೀನು ಬೇಕೆನ್ನಲು.ನೂರು ಪ್ರಶ್ನೆ ಕೇಳುವೆ ನೀನುಏಕೆ ಜೊತೆ ಇರಬೇಕೆಂದು.ನೀನೆಲ್ಲ ಪ್ರಶ್ನೆಗಳಿಗೆಒಂದೇಯೊಂದು ಉತ್ತರ ನಂದು.ಸಾವಿರಾರು ನೂವು ಕೊಟ್ಟೆಹಣೆಬರಹ ಎಂದು. ಹೆಸರು ಇಟ್ಟೆಆದರೂ ನಾ ನಿನ್ನಲ್ಲೇ ಮನಸನಿಟ್ಟೆನಿನ್ನೆಲ್ಲ ಮಾತಿಗೂ..ನಿನ್ನೆಲ್ಲ ಪ್ರಶ್ನೆಗೂ..ನನ್ನ ಉತ್ತರ ಒಂದೇಯೊಂದು........"ಪ್ರೀತಿಸುವೆ ನಿನ್ನನು ಎಂದೆಂದು"

ದಾಸಿಯ ಮಾಡುವೆಯಾ ನೀ ಎನ್ನಾ
















ನಿನಗೆ ರಾಧೆಯ ಪ್ರೀತಿ ಇಷ್ಟಾನ ಇಲ್ಲಾ ಈ ನಿನ್ನ ದಾಸಿಯಾ ಕಂಬನಿ ಇಷ್ಟಾನಾ? ಕಾಪಲರ ಕೈಯಲಿ ಸಿಕ್ಕಿ ಕಸವಾಗಿರುವೆ ಕ್ರಷ್ಣಾ ನಂದನವನವಿಲ್ಲ, ಕೊಳಲಿಲ್ಲಾ ನವಿಲಗರಿಯಿಲ್ಲಾ ದಾಸಿಯ ಮಾಡುವೆಯಾ ನೀ ಎನ್ನಾ, ನಿನ್ನ ಪಾದದಡಿಯಲಿ ಅರಮನೆಯಿಲ್ಲ, ಅಂತಪುರವಿಲ್ಲಾ ಕಾಲ್ಗೆಜ್ಜೆಯ ಸದ್ದಿಲ್ಲ, ಕೈಬಳೆಗಳ ನಾದವಿಲ್ಲ ಹೂಮೊಗ್ಗುಗಳ ನಲಿದಾಟವಿಲ್ಲ, ಕೋಗಿಲೆಯ ಚಿಲಿಪಿಲಿಯಿಲ್ಲಾ ಕ್ರಿಷ್ಣಾ.. ಸೆರಿಸುವೆಯಾ ನಿನ್ನ ಪಾದದಡಿಯಲೆನ್ನಾ