03 July 2008

ಹರಿಹರ ಮಾತೆ


ಒಂದೊಂದು ದೆವತೆಯು ರೂಪದಲ್ಲಿ ಬಿನ್ನವಾಗಿದೆ,ಆದರೆ ಸ್ವರೂಪದಲ್ಲಿ ಅವರೆಲ್ಲಾ ಒಂದೆ.ದೆವರ ಸ್ವರೂಪ ಎನ್ನುವುದು ಅದರ ಆಂತರೀಕ ಘಟನೆಯಾಗಿದೆ.ಅಂತರಂಗ ನಮಗೆ ನೊಡಲು ಸಾದ್ಯವಿಲ್ಲ,,ನಮ್ಮ ಅಂತರಂಗ ನಮಗೆ ನೊಡಲಸಾದ್ಯವಾಗಿರುವಾಗ..ದೇವರ ಅತವಾ..ದೇವರ ಮುರ್ತಿಯ ಅಂತರಂಗವನ್ನು ನನ್ನ ನಗ್ನವಾದ ಕಣ್ಣು ಹೇಗೆ ತಾನೆ ನೊಡುತ್ತದೆ?.













ಹರಿಹರ ಮಾತೆ

ಮಹಾತಾಯೆ ಮರಿಯೇ
ಮನುಕುಲದ ತಾಯೇ
ನೀನೆಲ್ಲಿರುವೆ ತಾಯೇ

ನಾ ಎಲ್ಲಿ ಹುಡುಕಲಿನ್ನು ನಿನ್ನಾ
ಹೇಗೆ ಒಲಿಸಲಿನಿನ್ನಾ..
ಮರೆತೆಯಾ ಅಮ್ಮಾ ನನ್ನಾ..

ನೀಲಾಕಾಶದಶ್ಟು ವಿಶಾಲ ನೀ
ನೀಲಿಕಡಲಿಗಿಂತಲೂ ಆಳ ನೀ
ಅಣುವಿನಷ್ಟೆ.. ತಾಯಿ ನಾ ನಿನ್ನ ಮುಂದೆ...











ಜಪಮಾಲೆ


ಜಪಿಸಲೆ ನಾನೊಮ್ಮೆ ನಿನ್ನ ಜಪವಾ
ದರಿಸಲೆ ನಾನೊಮ್ಮೆ ಜಪಮಾಲೆಯಾ
ಮರೆಯಲೆ ನಾನೊಮ್ಮೆ ನನ್ನ ನೊವಾ
ಹಾಡಲೆ ನಾನೊಮ್ಮೆ ನಿನ್ನ ಗಾಯನವಾ?

27 January 2008

ನನ್ನ ನಲ್ಲನಾಗಲು ಒಲ್ಲದವನಿಗೆ
















ಏನೆಲ್ಲಾ ಆಸೆಗಳು ಮನದೊಳಗೆ ತುಂಬಿ
ಜೇನಿನಂತ ನುಡಿಯ ನುಡಿದು ಎನ್ನ ಹೃದಯದಲಿ
ಮನೆ ಮಾಡಿ ನನ್ನ ನಿದಿರೆಯ ಕದಿಯುತಿದ್ದ
ನನ್ನ ಹುಡುಗ ನೀನೆಲ್ಲಿ ಮರೆಯಾದೆ !

ಮಾತು ಮಾತಿಗೂ ನನ್ನ ಜೀವನ ನೀನೆಂದು
ನನ್ನ ಬಾಳ ಬೆಳಗುವ ಜ್ಯೋತಿ ನೀನೆಂದು
ನನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕೆರಿಸುತಿದ್ದ
ನನ್ನ ನೀಲಿ ಕಂಗಳ ಮುದ್ದು ಹುಡುಗ ! ನೀನೆಲ್ಲಿ ಮರೆಯಾದೆ !

ನಿನ್ನ ಸ್ಪರ್ಶಕೆ ಕಾದು ಕಾತರಿಸುತಿದ್ದ ನನ್ನ ಮನ
ನಿನ್ನಿಂದ ಏಕೆ ಹೀಗೆ ದೂರ ಹೋದರೆ ಸಾಕೆಂದು ಕಾತರಿಸುತಿದೆ
ನಿನ್ನ ಕಂಡೊಡನೆ ಕುಣಿಯುತಿದ್ದ ನನ್ನ ಮನಸು
ನಿನ್ನ ನೆರಳ ಕಂಡರೂ ಹೀಗೇಕೆ ಸಿಡಿ ಮಿಡಿ ಗೋಳ್ಳುತಿದೆ!

ಬುದ್ದಿವಂತ ಹುಡುಗರು ನೀವು ! ಪ್ರೀತಿಯಲಿ ನೊಂದರೆ ಸಾಕು
ಗೂಬೆಯ ನಮ್ಮ ಮೇಲೆ ಕೂರಿಸಿ ನೀವು ಪಲಾಯನವಾಗುವಿರಿ
ಪ್ರೀತಿಯ ಹುಡುಗ ಮೋಸದ ಹುಡುಗಿ ಎಂದೆಲ್ಲ ಬರೆದು ಕೊಂಡು
ನಮ್ಮಿಂದಲೇ ನಿಮ್ಮ ಜೀವನ ಹಾಳಾಯಿತೆಂದು!


ಶಪಿಸಿ ಕುಡಿದು ನೋವ ಮರೆಯುತಿದ್ದೇವೆ ಎಂದು ಕತೆಯನು ಹೇಳುವಿರಿ 
ನೀವು ಹೇಳಿದಂತೆ ಕೇಳಿದರೆ ನಾವೆಲ್ಲಾ ನಿಮ್ಮ ಕನಸಿನ ರಾಜಕುಮಾರಿಯರು
ಇಲ್ಲದೆ ಹೋದರೆ ಸುಮ್ಮನೆ ಸಮಯ ಕಳೆಯಲು ಪ್ರೀತಿಸುವ ಹುಡುಗಿಯರು
ಏನೆಲ್ಲಾ ನಮ್ಮಿಂದ ಬಯಸುವ ನನ್ನ ಮುದ್ದಿನ ಹುಡುಗ!

ನೀನೇಕೆ ನನ್ನಿಂದ ಪರಿಶುದ್ದ ಪ್ರೇಮ ಬಯಸುವುದಿಲ್ಲ
ಎಲ್ಲದಕ್ಕೂ ಒಂದು ಮಿತಿಯಿದೆ ಎಂದು ಅರಿಯುವುದಿಲ್ಲ!!!