09 February 2007

ಅದು ನಿನ್ನ ಬದುಕು ನಿನ್ನ ಪ್ರೀತಿ
























  • ಎಲ್ಲ ಕಳಕೊಂಡೆ ಎಂದು ಅಳುತ ಕೂರ ಬೇಡ ಗೆಳತಿ 
    ಕಳೆದು ಕೊಂಡಿದ್ದು ನಿನಗಲ್ಲ ! 
    ನಿಂದಂತು ಅಲ್ಲವೇ ಅಲ್ಲ !

    ಆ ಕಳೆದ ದಿನಗಳ ನೆನೆದು ಕೊರಗಬೇಡ ಗೆಳತಿ 
    ಅದು ಸಿಹಿ ನೆನಪಿನ ಬುತ್ತಿ ಏನು ಅಲ್ಲ !

    ಬದುಕು ಎನ್ನೋದು ಹೂವಿನ ಹಾದಿ ಏನೂ ಅಲ್ಲ
    ಕಲ್ಲು ಮುಳ್ಳುಗಳ ಮೆಟ್ಟಿ ನಿಲ್ಲಬೇಕು ನೀನು ! 

    ಅರಿವಿಲ್ಲದೆ ಯಾರನ್ನೋ ಆರಿಸಿ ಕೊಂಡು ! 
    ಅರಿವಾದಾಗ ಅಳಬೇಡ ಗೆಳತಿ
    ಆರಿಸಿ ಕೊಂಡಿದ್ದರಲ್ಲೇ ಬದುಕ ಅರಸು ! 
    ಅದು ನಿನ್ನ ಬದುಕು ನಿನ್ನ ಪ್ರೀತಿ!


    ಕೊಂಚ ಮಾತು ಮಾತಿಗೆ ಅಳಬೇಡ ಗೆಳತಿ , 
    ಅಳು ನಿನ್ನ ಮೊಗಕೆ ಹೊಂದೋಲ್ಲ
    ಸುಮ್ಮ ಸುಮ್ಮನೆ ನಗಬೇಡ ಗೆಳತಿ 

    ನಗುವ ಹುಡುಗಿಯ ಯಾರೂ ಸುಮ್ಮನೆ ನಂಬೋಲ್ಲ
    ಅರಿತು ಕೊಳ್ಳಬೇಕು ಗೆಳತಿ 

    ಬದುಕು ಅದು ಸುಮ್ಮನೆ ಎಲ್ಲರಿಗೂ ಅರ್ಥ ಆಗೋಲ್ಲ !
    ಅರಿವು ಮಾಡಿಕೊಂಡು ನಡೆಯಬೇಕು ಗೆಳತಿ 

    ಹಾದಿಯಲಿ ಕಷ್ಟ ನಷ್ಟ ತಪ್ಪಿದ್ದಲ್ಲ
    ಸಿಗದೇ ಹೋದದ್ದ ನೆನೆದು ಕೊರಗ ಬೇಡ ಗೆಳತಿ 
    ಅದು ನಮ್ಮ ಅದೃಷ್ಟದಲ್ಲಿಲ್ಲ!

    ಅರಿತುಕೊಂಡವರ ಮನ ನೋಯಿಸಬೇಡ ಗೆಳತಿ 
    ಹೃದಯದ ನೋವಿಗೆ ಮದ್ದಿಲ್ಲ!

    ಬೇರೆಯವರ ಮೇಲೆ ಅವಲಂಬಿಸಬೇಡ ಗೆಳತಿ , 
    ಯಾರನ್ನು ನಂಬುವ ಆಗಿಲ್ಲ!

    ಮನದ ಮುಲೆಯಲಿ ಎದ್ದ ಈ ಪ್ರಶ್ನೆಗೆ ಕಾರಣ ಗೊತ್ತಿಲ್ಲ 
    ಅದು ನಿನ್ನ ಬದುಕು ನಿನ್ನ ಪ್ರೀತಿ!!1