09 April 2012

ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ

ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ
ನೊಂದ ಮನದವರಲ್ಲಿ ನಲಿವನ್ನೆಲ್ಲಿಂದ ಕೇಳಲಿ
ಹುಟ್ಟು ಕುರುಡಾದ ಪ್ರಪಂಚ ನಾನ್ಹೇಗೆ ಕಣ್ಣು ತೆರೆಯಲಿ
ಮೌನದಲ್ಲಿ ಮುಳುಗಿದ ಮನ ಮಾತನ್ನೆಲ್ಲಿಂದ ಆಡಲಿ
ಕಿತ್ತು ತಿನ್ನುವ ಜಗ ನಾನ್ಹೇಗೆ ಹಂಚಿ ತಿನ್ನಲಿ

ಇಚ್ಚೆಯನರಿಯದೆ ಬದುಕುವ ಜನ ಇವರ ಜೊತೆ ನಾನ್ಹೇಗೆ ಬಾಳಲಿ
ಪಿಸು ಮಾತಾನರಿಯದ ಮನ ಇವರಿಗೆ ಹೃದಯವನ್ನು ಹೇಗೆ ನೀಡಲಿ
ಆಡಲು ದನಿಯಿಲ್ಲ , ಮಾತಿಗೆ ಬೆಲೆಯಿಲ್ಲ , ಇವರ ನಾನೇನೆಂದು ಕೇಳಲಿ
ಬದುಕಿನ ಅರ್ಥ ಗೊತ್ತಿಲ್ಲ , ಇವರ ಜೊತೆ ನಾನ್ಹೇಗೆ ಬದುಕನುಡುಕಲಿ!

ಅರಿತು ಕೊಂಡು ಆರಿಸಿ ಕೊಂಡ ಸ್ನೇಹ ಉಳಿಯಲಿಲ್ಲ ಯಾರ ದೂರಲಿ
ನಂಬಿಕೆಯಿಟ್ಟು ಹಂಚಿಕೊಂಡ ಭಾವನೆಗೆ ಮೋಸ ಮಾಡಿದರೆ ಯಾರ ನಂಬಲಿ
ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿಯಾದರೆ ನಾನೇನು ಮಾಡಲಿ
ನಂಬಿಕೆ ಇಲ್ಲ ಜಗ , ಜನ ನಾನ್ಯಾರ ನಂಬಲಿ
ಒಡಲಿಗೆ ಕೊಳ್ಳಿ ಇಟ್ಟು ಹೊರಟವರ ಏನೆಂದು ಕರೆಯಲಿ !

ಏನೆಲ್ಲಾ ಮೇಲೆ ನಮಗೆ ಪ್ರೀತಿಯ ನೀಡಿದರೂ ಒಳಗಿನ ಮುಖ ಹೇಗೆ ತಿಳಿಯಲಿ
ಸಂಬಂಧಗಳ ಬೆಲೆ ಗೊತ್ತಿರದವರಲ್ಲಿ ಸಂಬಂಧವ ಹೇಗೆ ಬೆಳೆಸಲಿ
ಅನಿರಿಕ್ಷಿತವಾಗಿ ದೊರೆತವರ ನಾನ್ಹೇಗೆ ಅನುಮಾನಿಸಲಿ
ಒಪ್ಪಿಕೊಂಡ ಸ್ನೇಹದಲ್ಲಿ ದೋಷವನೆಲ್ಲಿಂದ ಕಾಣಲಿ
ಬೆನ್ನಿಗೆ ಇರಿದು ಹೋದವರ ನೆನೆದು ಏನೆಂದು ಕರೆಯಲಿ !..

ಮೌನದಿ ರೋಧಿಸುತಿದೆ ಮನ ನೆಮ್ಮದಿಯನ್ನೆಲ್ಲಿ ಹುಡುಕಲಿ
ವಂಚಿಸಿ ಹೋದವರ ನೆನೆದು ಏನು ಪ್ರಯೋಜನವಿಲ್ಲ ಏನು ಮಾಡಲಿ
ಚಿತ್ರ ವಿಚಿತ್ರ ಜನರ ಪ್ರಪಂಚ ಇಲ್ಲೇ ಬದುಕಬೇಕು ಅವಸರದಲಿ !

No comments:

Post a Comment