27 December 2012

ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ




ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ
ಅನಾವೃಷ್ಟಿಯಲ್ಲೂ ಸುರಿಯುತ್ತಿರುವೆ ನೀ ಮಳೆಯಾಗಿ.
ತಂಪಾದ ಧರೆ ,ದೊರೆಯಂತೆ ಕಂಡು
ತುಂಬಿಸಿಕೊಂಡಿವೆ ತನ್ನೆದೆಯ ತುಂಬಾ ಹಸಿರಿನಾ ಸಿರಿ.
ಉಸಿರಾಗಿ ಬರುವ ನೀನೊಂದು ಗಾಳಿ ,
ಸಿಹಿಸುದ್ದಿ ಉಲಿದು ,
ಅಲೆದಲೆದು ಬಂದು ನೆಲೆಸಿರುವೆ ನನ್ನಲ್ಲಿ .
ಕಣ್ಣಿಗೆ ಕಾಣುವ ಸುಂದರ ಮಳೆಬಿಲ್ಲು ನೀನು ,
ನುಣುಪಾದ ಮುಗಿಲು ಹಗಲಲ್ಲಿ ಹೊಳೆದೊಳೆದು
ಚಿತ್ತಾರ ಬಿಡಿಸಿವೆ ನನ್ನಲ್ಲಿ .
ಕಾಣುವೆನು ನಿನ್ನಲ್ಲಿ ಈ ಜಗವು ನನ್ನಲ್ಲಿ
ನಾನೆಂಥ ಧನ್ಯ ನೀನಿರಲು ಜೊತೆಯಾಗಿ

No comments:

Post a Comment