10 January 2011

ನೀನೇಕೆ ಬಂದೆ ನೆನಪೇ?










ನೆನಪೆ ನೆನಪಾಗಿ ಉಳಿಯದಿರು, 
ಮತ್ತೆ ಮತ್ತೆ ಬಂದು ನೀ ಕಾಡದಿರು,
ಕದಿಯಬೇಡ ನೀ ನನ್ನ ನಿದಿರೆಯ,
 ಮರೆಸಬೇಡ ನನ್ನ ಹಸಿವ.


ನೊಂದ ಮನಕ್ಕೆ ಮುಳ್ಳೇರೆಯಬೇಡ, ಇಲ್ಲದಿರೊ ನೆಮ್ಮದಿಯ ನೀ ಕದಿಯಬೇಡ.
ಹೋಗು ನೆನಪೆ ನೀ ದೂರ, 
ಬರಿದಾದ ಮನಕ್ಕೆ ಮತ್ತೆ ತಂದೆ ನೀ ಬರ.






ಬಂದರೆ ಮನಕ್ಕೆ ಇನೆಲ್ಲಿ ಇದೆ ಉಳಿಗಾಲ.
ಅಳುತ್ತಿರುವ ಮನಕ್ಕೆ ಸವಿ ನೆನಪುಗಳು ಏಕೆ,
ನೆನೆದು ನೆನೆದು ಅಳುತ್ತಲೇ ಇರುವ ಪರಿಸ್ಥಿತಿ ಬೇಕೇ.
ಬೇಡವೆಂದು ತಳ್ಳಿದರು ದೂರ, 


ಮತ್ತೇಕೆ ಇಲ್ಲಸಲ್ಲದ ನೆಪವೊಡ್ಡಿ ಬರುವೆ ನೀ ಹತ್ತಿರ,
ಎಲ್ಲ ಮರೆತು ನೆಮ್ಮದಿಯ ಹುಡುಕಲು ಹೋರಟ
 ಮನಸಿಗೆ ಬೇಡಿಯ ಹಾಕಿ ಮತ್ತೆ ಕರೆತಂದು 
ಕಣ್ಣಿರಿರಿಸುತ್ತಿರುವೆ ನೀ ನೆನಪೇ.


ಇರುವುದನೆಲ್ಲ ಹೊತ್ತು ಕೊಂಡು
 ಹೋದಳು ಉಸಿರೊಂದನ್ನ ಬಿಟ್ಟು ನನಗೆ,
ಇರುವುದೊಂದನ್ನ ಕದಿಯಲು 
ನೀನೇಕೆ ಬಂದೆ ನೆನಪೇ?

1 comment: