13 January 2011

ನಕ್ಷತ್ರಗಳನ್ನು ಪ್ರೀತಿಸಿದ ನನ್ನ ಗೆಳತಿ




ಕನಸುಗಳ ಜೊತೆ ಅವಳು ಗೆಳೆತನ ಬೆಳೆಸಿದ್ದು ಎಕಾಂತತೆಯಿಂದ ಪಾರಗಲಿರಬಹುದು, ಇಲ್ಲದಿದ್ದರೆ ಅವಳ ಆ ಸ್ವಬಾವ ಇರಬೆಕು ಎಕಾಂಗಿಯಾಗಿ ಕುಳಿತಿರುವಾಗ ಅವಳು ಎಕಾಂತತೆಯನ್ನರಿಯುತ್ತಿರಲಿಲ್ಲ.

 


"ಈ ಜೀವನ ಪೂರ್ತಿ ನಾನಿಲ್ಲಿ ಒಂಟಿಯಾಗಿರ
ಲು ಬಯಸುತ್ತೆನೆ.
ತುಂಬಿರುವ ನಿಶಬ್ದತೆ ದೇವರು ನನಗೆ ಕೊಟ್ಟಿರೊ ವರವಾದರೆ,ಈ ಲೋಕದ ಎಲ್ಲ ಕಶ್ಟಗಳನ್ನು ದೇವರು ನನಗೆ ಕೊಟ್ಟರೆ 
ನಾನಿಲ್ಲಿಒಬ್ಬಳೆ ಕುಳಿತು ಅಳಲು ಸಂತೋಷ ನನಗೆ". 


ಅಂತ ಅವಳ ಡಯರಿಯ ಹಾಳೆಗಳಲಿ ಗೀಚಿರುವುದು ನಾನು ನೋಡಿದ್ದುಂಟು.ಆ ಡಯರಿ, ಮತ್ತು ಅವಳ ಆ ಕೋಣೆ, ಅವಳಿಗೆ ತುಂಬಾ ಪ್ರಿಯವಾಗಿತ್ತು!!!!! ಅದೆ ಅವಳ ಲೊಕವಾಗಿತ್ತು.


"ನನಗೂ ತಿಳಿಯದ ನನ್ನ ಮನಸಿನ ಮೂಲೆಯಲ್ಲಡಗಿರುವ ಸಾವಿರಾರು ನೋವುಗಳು ಹಂಚಿಕೊಳ್ಳಲು ನಿನ್ನ ಈ ಹಾಳೆಗಳು ಮಾತ್ರ." 
ಅಂತ ಗೆಳತಿಗೆ ಅನ್ನೊಹಾಗೆ ಅವಳ ಡಯರಿಯ ಮೊದಲನೆ ಪುಟದಲಿ ಬರೆದಿದ್ದಳು.


ತುಂಬಿರುವ ಎಕಾಂತತೆಯಲಿ, ಅವಳು ಇಷ್ಟಪಡುವ ಅವಳನ್ನು ಇಷ್ಟಪಡುವ ಜನರಿರಬಹುದು ,ಅವರ ಜೊತೆಯಲೆಲ್ಲಾ ಅವಳು ಮಾತಡ್ತಾನೆ ಇರಬಹುದು,ಅವರು ಅವಳ ಜೊತೆನು..ಆದರೆ ವಾಸ್ತವದಲಿ ಅವಳು ಇವರ್ಯಾರ ಜೊತೆಯಲಿ ಮನಸು ಬಿಚ್ಚಿ ಮಾತಡಿರಲಿಕ್ಕಿಲ್ಲ.


ನಿಜವೇನಂದರೆ ಅವಳಿಗೆ ಅವರಲ್ಲಿ ಹಲವರನ್ನು ನೋಡಲು ಕೂಡ ಬಯ ಪಡ್ತಾ ಇದ್ದಳು ಅನ್ನೊ ವಿಶ್ಯ ಅವಳಿಗೆ ಅವರನ್ನ ನೊಡುವಾಗಲೆ ನೆನಪಿಗೆ ಬರುತ್ತಾ ಇತ್ತು.


ಹೀಗೆ ಎಲ್ಲರ ಜೊತೆ ಗೆಳೆತನ ಬೆಳೆಸಬೆಕು ಎಂದು ಅಸ್ಸೆ ಪಟ್ಟು , ಆದರೆ ಅವರ ಮುಂದೆ ಮಾತನಾಡಲಸಾದ್ಯವಾಗಿ, ತನನ್ಗೆ ಮಾತನಾಡಲು ಅಸಾದ್ಯವೆಂದು ತಿಳಿದ ಅವಳಿಗೆ ಕೊನೆಗೆ ಮೌನವೆ ಆಸರೆಯಾಯಿತು.


ಅವಳ ಮೌನ ಆರ್ದ್ರವಾಗಿತ್ತು.. ತನ್ನ ಮೌನ ಬಾಷೆಯನ್ನು ಪ್ರೀತಿಸೊ ಒಬ್ಬ ಪ್ರಿಯಕರನಿಗಾಗಿ ಅವಳು ಯಾವಗಲು ಆಸೆ ಪಡುತ್ತಾ ಇದ್ದಳು.. ತನ್ನ ಮನದ ಬಾವನೆಗಳಿಗೆ ಸ್ಪಂದಿಸುವಂತಹ ಒಬ್ಬ ಗೆಳೆಯ ಅವಳಿಗೆ ಸಿಕ್ಕಿದರೂ ಕೊನೆಗೆಕೆಯವಳು ಆ ಗೆಳೆಯನ ಮೌನದ ಬಾಷೆಯ ಪ್ರೀತಿಯನ್ನು ಕಾಣದವರ ತರಹದಲ್ಲಿ ನಟಿಸಿ ಆ ದಳವನ್ನುದುರಿಸಿದಳೆಂದು ನನಗಿನ್ನೂ ತಿಳಿಯದು. ಆದರೆ ಒಂದು ವಿಷಯ ಮಾತ್ರ ಸತ್ಯವಾಗಿತ್ತು.. ಅವಳಿಗೆ ಆ ಗೆಳೆಯ ತುಂಬಾ ಇಷ್ಟವಾಗಿತ್ತು.. ತುಂಬಾ...



ಜೀವನದ ವಸಂತಕಾಲವೆಂದರೆ ಯೌವ್ವನ. ಆ ವಸಂತಮುಗಿಯೊ ಮೊದಲೆ.. ಎಲೆಗಳನ್ನು ಹೂವುಗಳನ್ನು ಉದುರಿಸಿ, ಮರದಲಿ ಬರಿ ಒಣಗಿದ ಕೊಂಬೆಗಳನ್ನು ಮಾತ್ರ ಬಾಕಿಯಿರಿಸಿದ್ದು ನಾನು ನೋಡಿ ನಿಂತೆ.. ಕಾರಣವೇನೆಂದು ತಿಳಿಯೊ ಕೂತೂಹಲವಿದ್ದರು.. ನನ್ನ ಮನಸಿನ ಚಾಂಚಲ್ಯವನ್ನಡಗಿಸಿದೆ.


ಹುಣ್ಣಿಮೆಯಲಿಹರಿದುಬರುವ ಬೆಳದಿಂಗಳವಳಿಗೆ ಇಷ್ಟವಾಗುತ್ತಿರಲಿಲ್ಲ..
ಅಮವಾಸ್ಯೆಯ ಕಾರ್ಗತ್ತಲಿನಲಿ ಹೋಳೆಯುವ ಸ್ವರ್ಣ ನಕ್ಷತ್ರಗಳೆನಗೆ ಇಷ್ಟವೆಂದು ಬರೆದಿರುವ ಅವಳ ಡಯರಿಯ ಸಾಲುಗಳು ನನಗೆ ಅರ್ಥವಾಗಲಿಲ್ಲ.


ತುಂಬಾ ಕಾಲಗಳ ಬಳಿಕ ನನಗೆ ಸಿಕ್ಕಿದ ಕಾಗದವೋದಿ ತಿಳಿಯಿತು.. ಅವಳ ಆ ಮೌನ ಬಾಶೆಯ ಪ್ರಿಯಕರನಿಂದು ಅವಳಿಗಿಷ್ಟವಾಗಿರೊ ನಕ್ಷತ್ರಗಳ ಲೋಕದಲಿ ನಕ್ಶತ್ರಗಳ ಜೊತೆ ಸೇರಿ ಈ ಭೂಮಿಯ ಯಾತ್ರೆಯನ್ನು ಮುಗಿಸಿದ್ದಾನೆಂದು ತಿಳಿದಾಗ ಅವಳ ಡಯರಿಯ ಹಾಳೆಗಳನ್ನು ಮತ್ತೊಮ್ಮೆ ತಿರುವಿ ನೋಡಬೇಕೆಂದೆನಿಸಿತು.


ನಕ್ಷತ್ರಗಳೆಷ್ಟೆ ಶೊಭೆಯಲಿ ಮಿನುಗಿದರು ಅವಳು ಮೌನಿಯಾಗಿದ್ದಳು.. ಬೆಳದಿಂಗಳನ್ನು ಪ್ರೀತಿಸದೆ ಅಮವಾಸ್ಯೆಯ ಕತ್ತಲಿನ ನಕ್ಷತ್ರಗಳಳನ್ನು ಅವಳೆಕೆ ಪ್ರೀತಿಸುತ್ತಿದ್ದಳೆಂದು ನನಗಿನ್ನೊ ತಿಳಿದಿಲ್ಲ.. ಚಿಕ್ಕವಳಿರುವಾಗಲೆ ಕಳೆದುಕೊಂಡ ತನ್ನವರಿಗಾಗಿ.. ಇಲ್ಲ ಕಳದು ಹೋದ ತನ್ನ ಬಾಲ್ಯಕಾಲದ ಗೆಳೆಯನ ಪ್ರೀತಿಯನು ಆ ನಕ್ಷತ್ರಗಳ ಲೋಕದಲಿ ಹುಡುಕುತ್ತಾ ಇದ್ದಳೇನೊ?.


ತನ್ನ ಜನ್ಮದೋಶದ ಬಗ್ಗೆ ಅವಳ ಅಜ್ಜಿ ಅವಳಿಗೆ ಹೇಳುವಾಗ ಆವಳು ಎಷ್ಟೆ ತರ್ಕಿಸಿದರೂ.. ಮನಸಿನಲಿ ಕೋಲಾಹಲ ನಡೆಯುತ್ತಾ ಇತ್ತು.
ತನಗೆ ಬೇಕಾಗಿದ್ದ ತನ್ನವರನ್ನು ನಕ್ಶತ್ರಗಳ ಲೋಕದಲಿ ಸೆರಿಸಿದ್ದರಿಂದ ಇರಬಹುದು. 


ಅವಳಿಗೆ ನಕ್ಶತ್ರಗಳೆಂದರೆ ಪ್ರಣಯವಾಗಿತ್ತು.. ಅವಳ ಪ್ರೀತಿಯ ಪ್ರಿಯಕರ.. ನಕ್ಷತ್ರಗಳ ಲೊಕದಲಿ ಮಿನುಗು ತಾರೆಯಾಗಿ ಅವಳನ್ನ ನೋಡಿ ಮಿನುಗುತಿತ್ತೆನೊ.

 ಎಷ್ಟೆ ಅಗಲೋಣವೆಂದು ಶ್ರಮಿಸಿದರೂ ಅವಳ ಪ್ರಿಯಕರನಿಂದು ಅನಂತತೆಯಲೊಂದು ತಾರೆಯಾಗಿ.. ಅವಳ ಮನಸಿನಲ್ಲಿ ... ಮಿನುಗುತ್ತಾ ..

2 comments: