ಈ ಕ೦ಗಳು ಮ೦ಜಾದರೆ ನಾ ತಾಳೆನು ಭಯ ಬಿಡು
ಸದಾ ನಿನ್ನ ನೋವು ನನಗಿರಲಿ,
ನೆಮ್ಮದಿ ಸವಿ ನಿನಗಿರಲಿ,
ಸದಾ ಕಾಯುವೇ ಹೋದೊರೆಲ್ಲ ಒಳ್ಳೆಯವರು,
ಹರಸೋ ಹಿರಿಯರೂ
ಅವರ ಸವಿಯ ನೆನಪು ನಾವೆ, ಉಳಿದ ಕಿರಿಯರೂ
ನಿನ್ನ ಕೂಡ ನೆರಳ ಹಾಗೆ,
ಅವರ ಸವಿಯ ನೆನಪು ನಾವೆ, ಉಳಿದ ಕಿರಿಯರೂ
ನಿನ್ನ ಕೂಡ ನೆರಳ ಹಾಗೆ,
ಇರುವೆ ನಾನು ಎ೦ದು ಹೀಗೆ ,
ಒ೦ಟಿಯಲ್ಲ ನೀ
ನಾಳೆ ನಮ್ಮ ಮು೦ದೆ ಇಹುದು ದಾರಿ ಕಾಯುತಾ
ದುಃಖ ನೋವು ಎ೦ದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ
ನಾಳೆ ನಮ್ಮ ಮು೦ದೆ ಇಹುದು ದಾರಿ ಕಾಯುತಾ
ದುಃಖ ನೋವು ಎ೦ದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ
ಮು೦ದೆ ಸಾಗಬೇಕು ಧೈರ್ಯ ತಾಳುತಾ
No comments:
Post a Comment