ನೀನಾ ಮಾಧವ....?
ಏನಿಲ್ಲದ ನನ್ನೊಳಗೆ
ಪ್ರೀತಿಯ ಪ್ರವಾಹ ಹರಿಸಿದವ
ನೀನಾ ಮಾಧವ.......?
ಏನಲ್ಲದ ಮಾತೊಳಗೆ
ಮಧುರ ಭಾವ ಮೀಟಿದವ
ನೀನಾ ಮಾಧವ.......?
ಹಾಗಿಲ್ಲದ ನನ್ನೊಲವ
ಹಾಗೇ ಇರಬೇಕೆಂದಾದೇಶಿಸಿದವ
ನೀನಾ ಮಾಧವ.......?
ಹಾಗಲ್ಲದ ನನ್ನಂತರಂಗವ
ಹಾಗೆಂದೇ ಶುದ್ಧಿ ಮಾಡಿದವ
ನೀನಾ ಮಾಧವ........?
ಹೌದು , ನೀನೇ ಮಾಧವ
ಅದಕ್ಕೇ ಅಲ್ಲವೆ ನಾನು ಮೀರಾ....?!!
No comments:
Post a Comment