19 January 2015

ಬಯಸದೆ ಬಂದ ಭಾಗ್ಯ

















ಚಿನ್ನ ನಾ ಪ್ರೀತಿಸಿದೆ ನಿನ್ನ ...
ಬಯಸದೆ ಬೇರೇನೂ ನಿನ್ನಿಂದ ...
ಬಯಸದ ನನಗೆ ನೀ ಕೊಟ್ಟ ಉಡುಗೊರೆ..
ನೊಂದ ಹೃದಯ .......
ಬರಿದಾದ ಮನ .....
ಬತ್ತಿ ಹೋದ ಭಾವನೆಗಳು ....
ಕಾಡುವ ನೆನಪುಗಳು....
ಭಗ್ನ ಪ್ರೇಮಿ ಎಂಬ ಬಿರುದು .....
ಇವಿಷ್ಟು ಕೊಟ್ಟು ನೀ ಸ್ವಾಭಿಮಾನಿಯಾದೆ
ಪಡೆದ ನಾನು..... ..........
ಕಳೆದು ಹೋಗಿರುವೆ....ಚಿನ್ನಾ...
ಬಯಸದೆ ಬಂದ ಭಾಗ್ಯ ಅಂದರೆ ಇದೇನಾ?

13 February 2014

ಗೆಳತೀ ನೀ ಬೇಗ ಬಾ...

ಬಾ ನನ್ನ ಜೀವದರಸಿ
ಕಟ್ಟೊಣ ನಮಗೊಂದು
ಪ್ರೀತಿಯ ಗುಬ್ಬಚ್ಚಿ ಗೂಡು
ಬೆಳೆಸೋಣ ನಮ್ಮ ಪ್ರೀತಿಯ
ಕುಡಿಗಳನ್ನು ...

ಕೂಡಿಟ್ಟ ಕನಸೆಂಬ ಹುಲ್ಲು
ಕಡ್ಡಿಗಳಿಂದ ಕಟ್ಟೊಣ ಮುದ್ದಾದ
ಪ್ರೀತಿಯ ಗೂಡನು.. ಎಕಾಂತದಲಿ

ಉಣಿಸೊಣ ಪ್ರೀತಿಯ ಹನಿಗಳನು
ಕಲಿಸೊಣ ಜೀವನದ ಪಾಟಗಳನು
ಕಲಿಯೊಣ ಪ್ರೆಮದ ರಾಗಗಳನು

ಗೆಳತೀ ನೀ ಬೇಗ ಬಾ...

27 December 2012

ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ




ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ
ಅನಾವೃಷ್ಟಿಯಲ್ಲೂ ಸುರಿಯುತ್ತಿರುವೆ ನೀ ಮಳೆಯಾಗಿ.
ತಂಪಾದ ಧರೆ ,ದೊರೆಯಂತೆ ಕಂಡು
ತುಂಬಿಸಿಕೊಂಡಿವೆ ತನ್ನೆದೆಯ ತುಂಬಾ ಹಸಿರಿನಾ ಸಿರಿ.
ಉಸಿರಾಗಿ ಬರುವ ನೀನೊಂದು ಗಾಳಿ ,
ಸಿಹಿಸುದ್ದಿ ಉಲಿದು ,
ಅಲೆದಲೆದು ಬಂದು ನೆಲೆಸಿರುವೆ ನನ್ನಲ್ಲಿ .
ಕಣ್ಣಿಗೆ ಕಾಣುವ ಸುಂದರ ಮಳೆಬಿಲ್ಲು ನೀನು ,
ನುಣುಪಾದ ಮುಗಿಲು ಹಗಲಲ್ಲಿ ಹೊಳೆದೊಳೆದು
ಚಿತ್ತಾರ ಬಿಡಿಸಿವೆ ನನ್ನಲ್ಲಿ .
ಕಾಣುವೆನು ನಿನ್ನಲ್ಲಿ ಈ ಜಗವು ನನ್ನಲ್ಲಿ
ನಾನೆಂಥ ಧನ್ಯ ನೀನಿರಲು ಜೊತೆಯಾಗಿ