27 December 2012

ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ




ಸ್ರಷ್ಟಿ ಚುಂಬಕ ನಿನ್ನ ದ್ರಷ್ಟಿಯಲ್ಲಿ
ಅನಾವೃಷ್ಟಿಯಲ್ಲೂ ಸುರಿಯುತ್ತಿರುವೆ ನೀ ಮಳೆಯಾಗಿ.
ತಂಪಾದ ಧರೆ ,ದೊರೆಯಂತೆ ಕಂಡು
ತುಂಬಿಸಿಕೊಂಡಿವೆ ತನ್ನೆದೆಯ ತುಂಬಾ ಹಸಿರಿನಾ ಸಿರಿ.
ಉಸಿರಾಗಿ ಬರುವ ನೀನೊಂದು ಗಾಳಿ ,
ಸಿಹಿಸುದ್ದಿ ಉಲಿದು ,
ಅಲೆದಲೆದು ಬಂದು ನೆಲೆಸಿರುವೆ ನನ್ನಲ್ಲಿ .
ಕಣ್ಣಿಗೆ ಕಾಣುವ ಸುಂದರ ಮಳೆಬಿಲ್ಲು ನೀನು ,
ನುಣುಪಾದ ಮುಗಿಲು ಹಗಲಲ್ಲಿ ಹೊಳೆದೊಳೆದು
ಚಿತ್ತಾರ ಬಿಡಿಸಿವೆ ನನ್ನಲ್ಲಿ .
ಕಾಣುವೆನು ನಿನ್ನಲ್ಲಿ ಈ ಜಗವು ನನ್ನಲ್ಲಿ
ನಾನೆಂಥ ಧನ್ಯ ನೀನಿರಲು ಜೊತೆಯಾಗಿ

26 December 2012

ಭಂದೀಕಾನೆ

ಬಾವನೆಗಳ ಬಂದೀಕಾನೆಯಲೆನ್ನಾ
ಕೂಡಿಟ್ಟು.. ಎಲ್ಲಿರುವೆ ನೀ ಗೆಳೆಯಾ

ಕಾದಿರುವೆ ನಾ ನಿನಗೆಂದೆ ಎಳುಜನುಮ
ಬರದೆ ಹೂಗುವೆಯಾ ನೀ ನನ್ನರಮನೆಗೆ

ಮಂಜಿನ ಹನಿಗಳಿಂದ ಪೊಣಿಸಿದ ನನ್ನ
ರಕ್ಕೆಗಳು ಸಾಲದು ನಿನ್ನ ಬಳಿ ಬರಲು

ಅಂತರಂಗದ ಚಕ್ರವ್ಯೂಹವನು ಬೆದಿಸಿ
ಬರುವೆಯಾ ಆತ್ಮದ ಅರಮನೆಗೆ ಕರೆದೊಯ್ಯುವೆಯಾ

ಬರುವೆಯಾ ನೀ ಗೆಳೆಯಾ ಎನ್ನ ಬಿಡಿಸಲು
ಸೆರಿಸುವೆಯಾ ನಿನ್ನ ತೊಳಲೆನಾ ಓ ಗೆಳೆಯಾ?