19 August 2010

ಗೆಳತೀ..

ಇರುಳಿನ ಮಹಾ ನಿದ್ರೆಯಿಂದ ಎಬ್ಬಿಸಿ

ವರ್ಣದ ಗರಿ ನೀಡಿದೆ ನೀ..ನನ್ನ ರಕ್ಕೆಗಳಿಗೆ
ಹಾರಲೊಂದು ನೀಲಾಕಾಶವನ್ನೂ, ನಿನ್ನಾತ್ಮದ
ಶಿಕರದಲೊಂದು ಗೂಡನ್ನೂ ನೀಡಿದೆ
ನೀಹೂಮೊಗ್ಗಿನಲೂ, ತಂಗಾಳಿಯಲೂ ಎಲ್ಲೆಲ್ಲೂ
ನಿನ್ನ ಪರಿಮಳಜೀವರಸ ಬರಡಾಗುತಿರಲು
ಒಂದು ಪ್ರೆಮ ಬಿಂದು ಹಸಿರಾಗಿ ಕಾದೆ
ನೀಕರುಣೆಯ ನೀಲಾಕಾಶದಲೊಂದು
ಬಾನಕ್ಕಿಯಾಗಿ ತೇಲಿ ಹೋದೆ
ನೀಮರಿ ಗುಬ್ಬಿಯೊಂದಳಲು,
ಮಂಜೊಂದುದರಲು. ಕಣ್ಣಹನಿಯೊಂದು
ಜಾರಲುಮನದಲೊಂದು ಮಮತೆಯ
ಕೋಟೆಯನ್ನೆ ಕಟ್ಟಿಸಿ ನೀ ಮರೆಯಾದೆ
ನಿನ್ನ ಹ್ರದಯದಲೆನ್ನ ಹ್ರದಯ ಬೆಸೆದಿರುವೆ
ನಿನ್ನಲಬಯವಾ . ಹುಡುಕುವೆ.
ಅಗಲಲೆನಗಾಗುತ್ತಿಲ್ಲಾ.....
ಬೇಡವೆನಗೆ,
ನಿನ್ನಾತ್ಮದಲೊಂದು ಮಂಜಿನ
ಹನಿಯಾಗಿ ನಿನ್ನ
ನೆನಪಲಿಕರಗಿ ನಿನ್ನ ಉಸಿರಿನಲೆ
ನನ್ನಾತ್ಮವನ್ನು ಮುಗಿಸುವೆ ನನ್ನ ಗೆಳತೀ..

No comments:

Post a Comment