30 November 2007
09 February 2007
ಅದು ನಿನ್ನ ಬದುಕು ನಿನ್ನ ಪ್ರೀತಿ
ಎಲ್ಲ ಕಳಕೊಂಡೆ ಎಂದು ಅಳುತ ಕೂರ ಬೇಡ ಗೆಳತಿ
ಕಳೆದು ಕೊಂಡಿದ್ದು ನಿನಗಲ್ಲ !
ನಿಂದಂತು ಅಲ್ಲವೇ ಅಲ್ಲ !
ಆ ಕಳೆದ ದಿನಗಳ ನೆನೆದು ಕೊರಗಬೇಡ ಗೆಳತಿ
ಅದು ಸಿಹಿ ನೆನಪಿನ ಬುತ್ತಿ ಏನು ಅಲ್ಲ !
ಅದು ಸಿಹಿ ನೆನಪಿನ ಬುತ್ತಿ ಏನು ಅಲ್ಲ !
ಬದುಕು ಎನ್ನೋದು ಹೂವಿನ ಹಾದಿ ಏನೂ ಅಲ್ಲ
ಕಲ್ಲು ಮುಳ್ಳುಗಳ ಮೆಟ್ಟಿ ನಿಲ್ಲಬೇಕು ನೀನು !
ಅರಿವಿಲ್ಲದೆ ಯಾರನ್ನೋ ಆರಿಸಿ ಕೊಂಡು !
ಅರಿವಾದಾಗ ಅಳಬೇಡ ಗೆಳತಿ
ಆರಿಸಿ ಕೊಂಡಿದ್ದರಲ್ಲೇ ಬದುಕ ಅರಸು !
ಆರಿಸಿ ಕೊಂಡಿದ್ದರಲ್ಲೇ ಬದುಕ ಅರಸು !
ಅದು ನಿನ್ನ ಬದುಕು ನಿನ್ನ ಪ್ರೀತಿ!
ಕೊಂಚ ಮಾತು ಮಾತಿಗೆ ಅಳಬೇಡ ಗೆಳತಿ ,
ಅಳು ನಿನ್ನ ಮೊಗಕೆ ಹೊಂದೋಲ್ಲ
ಸುಮ್ಮ ಸುಮ್ಮನೆ ನಗಬೇಡ ಗೆಳತಿ
ಸುಮ್ಮ ಸುಮ್ಮನೆ ನಗಬೇಡ ಗೆಳತಿ
ನಗುವ ಹುಡುಗಿಯ ಯಾರೂ ಸುಮ್ಮನೆ ನಂಬೋಲ್ಲ
ಅರಿತು ಕೊಳ್ಳಬೇಕು ಗೆಳತಿ
ಅರಿತು ಕೊಳ್ಳಬೇಕು ಗೆಳತಿ
ಬದುಕು ಅದು ಸುಮ್ಮನೆ ಎಲ್ಲರಿಗೂ ಅರ್ಥ ಆಗೋಲ್ಲ !
ಅರಿವು ಮಾಡಿಕೊಂಡು ನಡೆಯಬೇಕು ಗೆಳತಿ
ಹಾದಿಯಲಿ ಕಷ್ಟ ನಷ್ಟ ತಪ್ಪಿದ್ದಲ್ಲ
ಸಿಗದೇ ಹೋದದ್ದ ನೆನೆದು ಕೊರಗ ಬೇಡ ಗೆಳತಿ
ಸಿಗದೇ ಹೋದದ್ದ ನೆನೆದು ಕೊರಗ ಬೇಡ ಗೆಳತಿ
ಅದು ನಮ್ಮ ಅದೃಷ್ಟದಲ್ಲಿಲ್ಲ!
ಅರಿತುಕೊಂಡವರ ಮನ ನೋಯಿಸಬೇಡ ಗೆಳತಿ
ಹೃದಯದ ನೋವಿಗೆ ಮದ್ದಿಲ್ಲ!
ಬೇರೆಯವರ ಮೇಲೆ ಅವಲಂಬಿಸಬೇಡ ಗೆಳತಿ ,
ಯಾರನ್ನು ನಂಬುವ ಆಗಿಲ್ಲ!
ಮನದ ಮುಲೆಯಲಿ ಎದ್ದ ಈ ಪ್ರಶ್ನೆಗೆ ಕಾರಣ ಗೊತ್ತಿಲ್ಲ
ಅದು ನಿನ್ನ ಬದುಕು ನಿನ್ನ ಪ್ರೀತಿ!!1
Subscribe to:
Posts (Atom)